ಹೊನ್ನಾವರ : ಪಟ್ಟಣದ ನ್ಯೂ ಇಂಗ್ಲೀಷ್ ಸ್ಕೂಲ್ನಲ್ಲಿ 89 ನೇ ಶಾಲಾ ಸಂಸ್ಥಾಪನಾ ದಿನ ಮತ್ತು ಪ್ರತಿಭಾ ಪುರಸ್ಕಾರ ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಜೆ.ಟಿ.ಪೈ ಅವರು ಶಾಲೆಯು ನಡೆದು ಬಂದ ಹಾದಿಯನ್ನು ವಿವರಿಸಿ, ಕೇವಲ ಕೆಲವೇ ಕೆಲವೇ ವಿದ್ಯಾರ್ಥಿಗಳಿಂದ ಆರಂಭವಾದ ಶಾಲೆ ಇಂದು ಸಾವಿರಕ್ಕೂ ಅಧಿಕ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಗಮನಾರ್ಹ ಎಂದರು.
ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿ ರಾಜ್ಯಕ್ಕೆ 7 ನೇ ಸ್ಥಾನ ಪಡೆದ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಶ್ರೇಯಾ ನೀಲಕಂಠ ನಾಯ್ಕ ಇವಳಿಗೆ ಶಾಲಾ ಸಿಬ್ಬಂದಿಗಳು ಹಾಗೂ ನಿವೃತ್ತ ಶಿಕ್ಷಕರು ವಿದ್ಯಾರ್ಥಿನಿ ಕಲಿಕೆಗೆ ಸಹಾಯವಾಗುವಂತೆ 14.600 ರೂ ನೀಡಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಗಣಿತ ಶಿಕ್ಷಕ ಜಯಂತ ನಾಯಕ ಇವರು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯ ಕಲಿಕೆಗೆ ಅನುಕೂಲವಾಗುವಂತೆ 25.000 ರೂ ನೀಡಿದರು. ಆರ್.ಜೆ. ಶಾನಭಾಗ್, ರಾಘವ ಬಾಳೇರಿ, ಶಾಲಾ ಶಿಕ್ಷಕ ಸಿಬ್ಬಂದಿಗಳು ಉಪಸ್ಥಿತರಿದ್ದರು.
Leave a Comment