ಹೊನ್ನಾವರ: ಸೂಪರ್ ರಾಯಲ್ ಹಾಲಿಡೆಸ್ ವತಿಯಿಂದ ಯುಕೆ ರಾಯಲ್ ಹಾಲಿಡೆಸ್ ಸಹಯೋಗದೊಂದಿಗೆ ಆಯ್ದ 3 ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ನೊಟ್ ಬುಕ್ ವಿತರಣೆ ಕಾರ್ಯಕ್ರಮ ತಾಲೂಕಿನ ಕಾಸರಕೊಡ ಮಹಾಗಣಪತಿ ನಾರಾಯಣ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರು ಹಾಗೂ ಶಾಲಾ ವಿದ್ಯಾರ್ಥಿಗಳಿಂದ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಕುರಿತು ರಾಯಲ್ ಹಾಲಿಡೆಸ್ ಸದಸ್ಯ ರಾಜು ನಾಯ್ಕ ಪ್ರಾಸ್ತಾವಿಕ ಮಾತನಾಡಿ, ನಮ್ಮ ಕಂಪನಿ ಪ್ರಾರಂಭದಲ್ಲಿ ಸಮಾನ ಮನಸ್ಕರಿಂದ ಕಡಿಮೆ ಪ್ರಮಾಣದ ಸದಸ್ಯತ್ವವಿದ್ದ ಕಂಪನಿ ಇಂದು ಮೂರುವರೆ ಲಕ್ಷಕ್ಕು ಹೆಚ್ಚು ಸದ್ಯರನ್ನು ಹೊಂದಿದೆ. ಆರ್ಥಿಕವಾಗಿ ದುರ್ಬಲರಾದವರಿಗೆ ಸ್ವಾವಲಂಭನೆಯನ್ನು ನೀಡಿದೆ. ಹಣದ ಜೊತೆಗೆ ಪ್ರವಾಸ ನೀಡಿದೆ ಅಲ್ಲದೇ ಇಂತಹ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ ಎಂದರು.
ಸೂಪರ್ ರಾಯಲ್ ಹಾಲಿಡೆಸ್ ಮ್ಯಾನೆಜಿಂಗ್ ಡೈರೆಕ್ಟರ್ ಡಾ.ಮದುಕರ್ ಮಾತನಾಡಿ, ನಮ್ಮ ಕಂಪನಿಯಿಂದ ಸಾವಿರಾರು ನಿರುದ್ಯೋಗಸ್ಥರಿಗೆ ಉದ್ಯೋಗ ನೀಡಿದೆ. ಸಂಸ್ಥೆಯ ಸದಸ್ಯರ ಸಹಕಾರದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಪನಿ ಬೆಳೆಯುತ್ತಿದೆ ಕಂಪನಿಯ ಲಾಭಾಂಶದಲ್ಲಿ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಎಸ್ಎಸ್ಎಲ್ಸಿಯಲ್ಲಿ ಕನ್ನಡ ಮಾದ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ಶ್ರೇಯಾ ನೀಲಕಂಠ ನಾಯ್ಕ ಇವಳನ್ನು ಸನ್ಮಾನಿಸಿಲಾಯಿತು.
ಕಾರ್ಯಕ್ರಮದ ಮುಖ್ಯ ಅತಿತಿಯಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಶ್ ಪದಕಿ ಮಾತನಾಡಿ ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಬಹಳಷ್ಟು ಹೋರಾಟ ನಡೆಸುತ್ತಿರುವ ಇಂತಹ ಸಂಧರ್ಬದಲ್ಲಿ ನಮ್ಮ ಶಾಲಾ ಮಕ್ಕಳಿಗೆ ಶಾಲಾ ಪರಿಕರ ನೀಡಿ ಪ್ರೋತ್ಸಹಾಹಿಸುತ್ತಿರುವ ಸೂಪ್ರ್ ರಾಯಲ್ ಹಾಲಿಡೆಸ್ ಕಂಪನಿಗೆ ಇಲಾಖೆ ವತಿಯಿಂದ ಧನ್ಯವಾದ ಅರ್ಪಿಸುತ್ತೆನೆ ಎಂದರು. ಸಮಾಜದಲ್ಲಿ ಶ್ರೀಮಂತರು ಬಹಳಷ್ಟಿದ್ದಾರೆ ಎಲ್ಲರಿಗು ಸಹಾಯ ಮಾಡುವ ಮನೋಭಾವನೆ ಇರುವುದಿಲ್ಲ ಆದರೆ ಕಂಪನಿಯು ಶಾಲಾ ವಿಧ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿರುವುದು ಮೆಚ್ಚುಗೆಗೆ ಪಾತ್ರವಾದದು ಎಂದರು. ಇಂದು 3 ಶಾಲೆಗಳಿಗೆ ನಿಡಿದ ಸೌಲಭ್ಯ ಮುಂದಿನ ದಿನಗಳಲ್ಲಿ 100 ಶಾಲೆಗಳಿಗೆ ನೀಡುವಂತಾಗಲಿ ಎಂದರು.
ಕಂಪನಿ ಸದಸ್ಯರಾಗಿರುವ ಬಿಜೆಪಿ ಹಿರಿಯ ಮುಖಂಡ ಎಮ್ ಜಿ ನಾಯ್ಕ ಮಾತನಾಡಿ ಈ ಸಂಸ್ಥೆ ಉಜ್ವಲ ಭವಿಷ್ಯ ಹೊಂದಿದೆ, ನಾನು ಕೂಡ ಈ ಕಂಪನಿಯಲ್ಲಿ ಸದಸ್ಯತ್ವ ಪಡೆದು ಸಾಕಷ್ಟು ಆದಾಯ ಪಡೆದಿದ್ದೇನೆ ಎಂದು ಅನುಭವ ಹಂಚಿಕೊಂಡರು. ಕಂಪನಿಗಳು ಸಾಕಷ್ಟು ಹುಟ್ಟಿಕೊಳ್ಳುತ್ತದೆ ಆದರೆ ಎಲ್ಲವು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ ಆದರೆ ಸೂಪ್ರ್ ರಾಯಲ್ ಹಾಲಿಡೆಸ್ ಕಂಪನಿ ವತಿಯಿಂದ ಶಾಲಾ ಮಕ್ಕಳಿಗೆ ಪಠ್ಯ-ಪುಸ್ತಕ ವಿತರಣೆ ಮಾಡುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದರು.
ನಂತರ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಕೋಡ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೋಟೆ, ಹಾಗೂ ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಮಳವಳ್ಳಿ-ಸಿದ್ದಾಪುರ ಶಾಲಾ ಮಕ್ಕಳಿಗೆ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಮಾಡಲಾಯಿತು.ಸಿದ್ದಾಪುರ ಶಾಲಾ ಮಕ್ಕಳ ಪರವಾಗಿ 17 ಬ್ಯಾಗ್ಗಳನ್ನು ಅಲ್ಲಿಯ ಶಿಕ್ಷಕರು ಪಡೆದರು.
ಕಾಸರಕೋಡ ಗ್ರಾಮ ಪಂಚಾಯತ್ ಅಧ್ಯಕ್ಷೆ ದಿಲ್ಶಾ ಬೇಗಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯÀಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕಾ ಅಧ್ಯಕ್ಷ ಎನ್ ಎಸ್ ನಾಯ್ಕ, ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ಗೌಡ, ಸೂಪರ್ ರಾಯಲ್ ಹಾಲಿಡೆಸ್ ಸದಸ್ಯರಾದ ರಾಜು ನಾಯ್ಕ, ಗಜಾನನ ನಾಯ್ಕ ಉಪಸ್ಥಿತರಿದ್ದರು.
Leave a Comment