ಹೊನ್ನಾವರ : ತಾಲೂಕಿನ ಅರೇಅಂಗಡಿ ಕೆರೆಕೋಣದಲ್ಲಿ ವಿವಾಹಿತ ಮಹಿಳೆಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಪವಿತ್ರಾ ಸುಧೀರ ಗಾಣಿಗ(22) ಈಕೆ ಆತ್ಮಹತ್ಯೆ ಮಾಡಿಕೊಂಡವಳಾಗಿದ್ದಾಳೆ. ಈಕೆಯನ್ನು ಬೈಂದೂರಿನ ಸುಧೀರ ಎಂಬುವನೊಂದಿಗೆ ಕಳೆದ ಒಂದುವರೆ ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಜೂ.19 ರಂದು ಗಂಡನೊಂದಿಗೆ ತಾಯಿ ಮನೆಗೆ ಬಂದಿದ್ದ ಈಕೆ ಜೂ.21 ರಂದು ಗುರುವಾರ ರಾತ್ರಿಯಿಂದ ನಾಪತ್ತೆಯಾಗಿರುವುದಾಗಿ ತಂದೆ ಸುಬ್ರಾಯ ನಾರಾಯಣ ಶೆಟ್ಟಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಪರಾಹ್ನದ ನಂತರ ಈಕೆಯ ಶವ ಪಕ್ಕದ ಮನೆಯ ಬಾವಿಯಲ್ಲಿ ಪತ್ತೆಯಾಗಿದ್ದು, ತಹಶೀಲ್ದಾರ ಮಂಜುಳಾ ಭಜಂತ್ರಿ ಹಾಗೂ ಪೋಲಿಸರು ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Leave a Comment