ಹೊನ್ನಾವರ .ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಹೊನ್ನಾವರ ಲಯನ್ಸಕ್ಲಬ್ಬಿನ 2018-19 ನೇ ಸಾಲಿನ ಅಧ್ಯಕ್ಷರಾಗಿ, ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಸಂಘಟಕರಾದ ಲಯನ್ ರಾಜೇಶ ವಿ. ಸಾಳೇಹಿತ್ತಲ್ರವರು ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಗಳಾಗಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕರಾದ ಲಯನ್ ಸುರೇಶ ಎಸ್. ಹಾಗೂ ಖಜಾಂಚಿಗಳಾಗಿ ಹೊನ್ನಾವರ ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷರಾದ ಲಯನ್ಯೋಗೇಶರಾಯ್ಕರ ರವರು ಆಯ್ಕೆಯಾಗಿರುತ್ತಾರೆ.ಅಲ್ಲದೇ ಸಹ ಕಾರ್ಯದರ್ಶಿಯಾಗಿ ಶಿಕ್ಷಕ ಲಯನ್ಉದಯ ನಾಯ್ಕರವರು ಆಯ್ಕೆಯಾಗಿರುತ್ತಾರೆ.
ಪದಗ್ರಹಣ ಸಮಾರಂಭವು ಬರುವ ಜುಲೈ 03, ಮಂಗಳವಾರ ಸಂಜೆ 6.30 ಘಂಟೆಗೆ ಫಾರೆಸ್ಟ್ಕಾಲೋನಿಯ ಲಯನ್ಸ್ ಸಭಾಭವನದಲ್ಲಿ ನಡೆಯಲಿದೆ.ಈ ಸಮಾರಂಭದಲ್ಲಿ ಉಡುಪಿ ಲಯನ್ಸ್ಕ್ಲಬ್ಬಿನ Pಒಎಈ ಲಯನ್ ವಿ.ಜಿ. ಶೆಟ್ಟಿ (Ist Vice District Governor (Elect)Dist 317-C) ಆಗಮಿಸಿ, ಪದಗ್ರಹಣ ನೆರವೇರಿಸಲಿದ್ದಾರೆ.ಶಿವಮೊಗ್ಗದ ಖ್ಯಾತದಂತ ವೈದ್ಯರಾದ ಡಾ|| ಶೀಲಾ ವಿಜಯ್, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ನೂತನ ಪದಾಧಿಕಾರಿಗಳಿಗೆ ಲಯನ್ಸ್ಕ್ಲಬ್ಬಿನಎಲ್ಲ ಸದ¸ssÀ್ಸರು, ಕುಟುಂಬ ವರ್ಗದವರು ಹಾಗೂ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.


Leave a Comment