ಹೊನ್ನಾವರ: ಅಪಘಾತ ಆದ ನಂತರ ಪರಿತಪಿಸುವ ಮೊದಲು ಅಪಘಾತ ಆಗದಂತೆ ತಡೆಯುವಲ್ಲಿ ಗಮನ ಹರಿಸಬೇಕು ಎಂದು ಹೊನ್ನಾವರ ಜೆ.ಎಮ್.ಎಫ್.ಸಿ. ನ್ಯಾಯಧೀಶ ಮಧುಕರ ಪಿ. ಭಾಗ್ವತ ಅಭಿಪ್ರಾಯಪಟ್ಟರು.
ಅವರು ಕಾಸರಕೋಡ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಮೂರನೇ ದಿನದ ಸಾಕ್ಷರತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೋಟಾರ ವಾಹನ ಕಾಯಿದೆ ಕುರಿತು ಮಾತನಾಡುತ್ತಿದ್ದರು.
ವಾಹನ ಚಾಲನಾ ಪರವಾನಿಗೆ ಮತ್ತು ವಾಹನ ವಿಮೆ ಇಲ್ಲದೇ ವಾಹನವನ್ನು ಚಲಾಯಿಸಬಾರದು. ಅಪಘಾತ ಆದಾಗ ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ರವಾನಿಸುವ ಪ್ರಯತ್ನ ಮಾಡಿದ್ದಲ್ಲಿ ಎಷ್ಟೋ ಜೀವಗಳನ್ನು ಉಳಿಸಬಹುದು. ಜೀವ ಉಳಿಸಲು ಮುಂದಾದವರೆಲ್ಲಾ ನ್ಯಾಯಾಲಯಕ್ಕೆ ಅಲೆಯಬೇಕಾದ ಭಯ ಬೇಡ. ಮನುಷ್ಯರಾಗಿ ಇಂತಹ ಸನ್ನಿವೇಶಗಳನ್ನು ಎದುರಿಸಬೇಕು. ಇಂತಹ ಸಂದರ್ಭದಲ್ಲಿ ಕಾನೂನು ತಿಳುವಳಿಕೆ ಇದ್ದರೆ ಸಮಸ್ಯೆಗಳು ಎದುರಾಗುವುದಿಲ್ಲ ಎಂದರು.
ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಉದ್ಘಾಟಿಸಿ ಮನೆ ಮನೆಗೆ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಆರಂಭಗೊಂಡ ಕಾನೂನು ಸಾಕ್ಷರತಾ ರಥ ಸಂಚಾರ ಕಾರ್ಯಕ್ರಮದಲ್ಲಿ ಜನತೆ ಹೆಚ್ಚು ಹೆಚ್ಚು ತೊಡಗಿಕೊಂಡು ಕಾಯಿದೆ ಜ್ಞಾನವನ್ನು ಪಡೆಯಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ವಿ. ನಾಯ್ಕ, ಗ್ರಾಮ ಪಂಚಾಯತ ಅಧ್ಯಕ್ಷೆ ದಿಲ್ಶಾದ ಬೇಗಂ, ಶಿಕ್ಷಣ ಇಲಾಖೆ ಅಧಿಕಾರಿ ಶಂಕರ ಹರಿಕಾಂತ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಹಿಸಿದ್ದರು.
ವೇದಿಕೆಯಲ್ಲಿ ಸರ್ಕಾರಿ ಅಭಿಯೋಜಕ ಭದರಿನಾಥ ನಾಯರಿ, ಹೆಚ್ಚುವರಿ ಸರ್ಕಾರಿ ವಕೀಲ ಪ್ರಮೋದ ಎಲ್.ಭಟ್ಟ, ವಕೀಲರ ಸಂಘದ ಕಾರ್ಯದರ್ಶಿ ಸೂರಜ್ ನಾಯ್ಕ, ನೋಡಲ್ ಅಧಿಕಾರಿ ಎಂ.ಜಿ. ಸಿಂಧೆ, ತಾ.ಪಂ. ಸದಸ್ಯೆ ಮೀರಾ ತಾಂಡೇಲ್ ಇನ್ನೀತರರು ಉಪಸ್ಥಿತರಿದ್ದರು.
ಮಧ್ಯಾಹ್ನ 3-00 ಗಂಟೆಗೆ ಮಾ.ಹಿ.ಪ್ರಾ ಶಾಲೆ ಗುಣವಂತೆಯಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮ ನಡೆಯಿತು. ಸರ್ಕಾರಿ ಅಭಿಯೋಜಕ ಭದರಿನಾಥ ನಾಯರಿ, ವಕೀಲೆ ಶಿಲ್ಪಾ ನಾಯ್ಕ, ವಿವಿಧ ಕಾನೂನು ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಶಾಲಾ ಮುಖ್ಯಾಧ್ಯಾಪಕ ಎಸ್.ಎಸ್. ಮುಕ್ರಿ, ಗ್ರಾ.ಪಂ. ಅಧ್ಯಕ್ಷೆ ದೇವಿ ಮಾಬ್ಲು ಗೌಡ, ಆನಂದು ರೊಡ್ರಿಗೀಸ್ ಇನ್ನೀತರರು ಉಪಸ್ಥಿತರಿದ್ದರು.
ಹಾಗೂ ಸಾಯಂಕಾಲ 5.00 ಗಂಟೆಗೆ ಮಂಕಿ ಪಂಚಾಯತ ಸಭಾಭವನದಲ್ಲಿ ಕಾನೂನು ಸಾಕ್ಷರತಾ ಕಾರ್ಯಕ್ರಮ ನಡೆಯಿತು. ಹೊನ್ನಾವರ ಜೆ.ಎಮ್.ಎಫ್.ಸಿ. ನ್ಯಾಯಧೀಶ ಮಧುಕರ ಪಿ. ಭಾಗ್ವತ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಬಾಲಚಂದ್ರ, ವಕೀಲ ಉದಯ ನಾಯ್ಕ ಚಿತ್ತಾರ ಕಾನೂನು ಕುರಿತು ಮಾಹಿತಿ ನೀಡಿದರು.
Leave a Comment