ಹೊನ್ನಾವರ : ಬರುವ ಮಂಗಳವಾರ ದಿ.6 ರಂದು ಪರೇಶ ಮೇಸ್ತನ ನಿಗೂಢ ಸಾವಿನ ತನಿಖೆಯನ್ನು ಸಿ.ಬಿ.ಐ. ಮಂದಗತಿಯಲ್ಲಿ ನಡೆಸಿರುವುದನ್ನು ವಿರೋಧಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕೈಗೊಂದಿರುವ 24 ಗಂಟೆಗಳ ಉಪವಾಸ ಸತ್ಯಾಗ್ರಹಕ್ಕೆ ಹೊನ್ನಾವರ ಜನಪರ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಮಾರ್ಷಲ್ ಡಿಸೋಜಾ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಿ.ಬಿ.ಐ. ತನಿಖೆಯನ್ನು ತಕ್ಷಣ ಮುಗಿಸಿ ಸರಕಾರಕ್ಕೆ ಪಾರದರ್ಶಕ ವರದಿ ನೀಡುವುದರ ಮೂಲಕ ಪರೇಶ ಮೇಸ್ತನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಕೋರಿದ್ದಾರೆ.
ಮಾರ್ಷಲ್ ಡಿಸೋಜಾ ಅನೇಕ ಜನಪರ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದು ಮೂರು ವರ್ಷಗಳ ಹಿಂದೆ ಗಣರಾಜ್ಯೋತ್ಸವದ ದಿನದಂದು ರಾಷ್ಟೀಯ ಭಾವೈಕ್ಯೆತೆ ಮತ್ತು ಸಾಮಾಜಿಕ ಕಳಕಳಿಯಿಂದ ಕಣ್ಣಿಗೆ ಕಪ್ಪುಬಟ್ಟೆ ಧರಿಸಿ ಹೊನ್ನಾವರ ಪಟ್ಟಣದ ಬೀದಿಗಳಲ್ಲಿ ನಾಲ್ಕು ಚಕ್ರದ ಚೀಪ್‍ನ್ನು ಚಲಾಯಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದರು.
Leave a Comment