• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅರಣ್ಯಾಧಿಕಾರಿಗಳ ದೌರ್ಜನ್ಯ – ಹಾನಿಗೊಳಗಾದ ಬೆಳೆಯೊಂದಿಗೆ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದ ಬುಡಕಟ್ಟು ಸಿದ್ದಿ ಸಮುದಾಯದ ಜನತೆ –ಅರಣ್ಯಾಧಿಕಾರಿಗಳ ವಿರುದ್ದ ತೀವೃ ಆಕ್ರೋಶ

July 13, 2018 by Yogaraj SK Leave a Comment

ಹಳಿಯಾಳ:- ತಾಲೂಕಿನ ಸಾಂಬ್ರಾಣಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ರೈತರು ಬೆಳೆದ (ಬೆಳೆ)ಫಸಲನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶಗೊಳಿಸಿ, ರೈತರ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಿ ಬುಡಕಟ್ಟು ಸಿದ್ದಿ ಸಮುದಾಯದಕ್ಕೆ ಸೇರಿದ ರೈತರು ಹಾನಿಗೊಳಗಾದ ಬೆಳೆಯೊಂದಿಗೆ ಶುಕ್ರವಾರ ಹಳಿಯಾಳ ತಹಶೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು.  ಬುಡಕಟ್ಟು ಸಿದ್ದಿ ಜನಾಂಗದ ಧ್ವನಿಯಾಗಿರುವ ಜಿಲ್ಲಾ ಬುಡಕಟ್ಟು ಅಭೀವ್ಯಕ್ತಿ ವೇದಿಕೆ ಸಂಘಟನೆಯ ನೇತೃತ್ವದಲ್ಲಿ ದೌರ್ಜನ್ಯಕ್ಕೆ ಒಳಗಾದ ಅರಣ್ಯವಾಸಿಗಳಾದ ಸಿದ್ದಿ ಸಮುದಾಯದ ರೈತರು ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಹಾನಿಗೊಂಡ ಲಕ್ಷಾಂತರ ರೂ. ಬೆಲೆಯ ಗೋವಿನ ಜೋಳ ಫಸಲನ್ನು ಹಳಿಯಾಳದ ಮಿನಿ ವಿಧಾನಸೌಧದಕ್ಕೆ ತೆರಳುವ ಗೇಟ್‍ನಲ್ಲಿ ಹಾಕಿ ಅರಣ್ಯಾಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಗೇಟ್ ತಡೆದು ಪ್ರತಿಭಟಿಸಿದರು.    ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವಿದ್ಯಾಧರ ಗುಳಗುಳಿಯವರಿಗೆ ರಾಜ್ಯಪಾಲರಿಗೆ, ಕಂದಾಯ ಸಚಿವರಿಗೆ, ಜಿಲ್ಲಾದಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಅಧ್ಯಕ್ಷ ದಿಯೋಗ ಸಿದ್ದಿ ಸಲ್ಲಿಸಿದರು.  ಮನವಿಯಲ್ಲಿ ಸಾಂಬ್ರಾಣಿ ವಲಯದ ಬುಕ್ಕಿನಕೊಪ್ಪ ಗ್ರಾಮದ ರೇಣುಕಾ ಪಾವಲು ಸಿದ್ಧಿಯ ಭೂಮಿ ಸರ್ವೆ ನಂ.: 37 ರಲ್ಲಿ ಅನೇಕ ದಶಕಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದು ಅರಣ್ಯ ಹಕ್ಕು ಸಮಿತಿ ವತಿಯಿಂದ ಜಿ.ಪಿ.ಎಸ್. ಮಾಡಿ ಚಕಬಂದಿ ಮಾಡಿದ್ದು ಹಾಗೂ 2005ರ ಪೂರ್ವದ ಸಂಪೂರ್ಣ ದಾಖಲೆಗಳನ್ನು ಒದಗಿಸಿದ್ದು, ಬುಡಕಟ್ಟು ಹಾಗೂ ಪಾರಂಪರಿಕ ಅರಣ್ಯ ವಾಸಿಗಳ ಮಾನ್ಯ ಮಾಡುವ ಆದೇಶ ಸಂಖ್ಯೆ 2006 ರಂತೆ ಭೂಮಿ ಮಾನ್ಯ ಮಾಡಲು ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ದಾಖಲೆಗಳನ್ನು ಪೂರೈಸಿ ಪ್ರಕರಣಗಳು ಉಪಸಮಿತಿ ಮತ್ತು ಜಿಲ್ಲಾ ಸಮಿತಿ ಸಮ್ಮುಖದಲ್ಲಿವೆ ಅಲ್ಲದೇ ಬುಡಕಟ್ಟು ಸಮುದಾಯದ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ 2005ರ ಪೂರ್ವ ದಾಖಲೆ ಪೂರೈಸಿದಲ್ಲಿ ಭೂಮಿ ಹಕ್ಕು ಮಾನ್ಯ ಮಾಡುವ ಆದೇಶವನ್ನು ಕೇಂದ್ರ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯದ ಆದೇಶದ ಪ್ರಕಾರ ಯಾವುದೇ ಬುಡಕಟ್ಟು ಸಮುದಾಯದ ಹಕ್ಕನ್ನು ಕಸಿದುಕೊಳ್ಳಬಾರದೆಂಬ ಸುಪ್ರಿಂಕೋರ್ಟ್ ಆದೇಶ ಇದ್ದರೂ ಸಹ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ 1989 ರಿಂದ ಸಿದ್ಧಿ ಬುಡಕಟ್ಟು ಬದುಕಿನ ಜೊತೆ ಚೆಲ್ಲಾಟ ಆಡುತ್ತಾ ಪ್ರತಿ ವರ್ಷ ಸಿದ್ದಿ ರೈತರು ಬೆಳೆದ ಫಸಲನ್ನು ಬೇಕಂತಲೇ ನಾಶ ಮಾಡುತ್ತಾ ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಲಾಗಿದೆ.   ಶುಕ್ರವಾರ ಸಾಂಬ್ರಾಣಿ ವಲಯದ ಅರಣ್ಯ ಇಲಾಖೆಯ ಉಮೇಶ ಹಾಗೂ ಶೋಭಾ ಎನ್ನುವ ಅಧಿಕಾರಿಗಳು ರೇಣುಕಾ ಸಿದ್ದಿಯ ಹೊಲಕ್ಕೆ ತೆರಳಿ ಆಕೆಯ ಮೇಲೆ ದೌರ್ಜನ್ಯ ನಡೆಸಿ ಬೆಳೆ ಹಾಳು ಮಾಡಿದ್ದಾರೆಂದು ನೇರವಾಗಿ ಆರೋಪಿಸಿರುವ ಬುಡಕಟ್ಟು ವೇದಿಕೆ ದಿಯೋಗ ಸಿದ್ದಿ ಸರ್ವೋಚ್ಚ ನ್ಯಾಯಾಲಯ ಹಾಗೂ ಸರ್ಕಾರಗಳ ಆದೇಶವನ್ನು ಮಾನ್ಯ ಮಾಡದ ಹಳಿಯಾಳ ಅರಣ್ಯ ಇಲಾಖೆಯವರು ಗಿರಿಜನ, ಅರಣ್ಯವನ್ನು ನಂಬಿಕೊಂಡು ಶತಮಾನಗಳಿಂದ ಬದುಕು ಸಾಗಿಸುತ್ತಿರುವ ಸಮಾಜದ ಮುಖ್ಯವಾಹಿನಿಯಿಂದ ತೀರ ಹಿಂದೂಳಿದಿರುವ ಜನಾಂಗದ ಮೇಲೆ ಪದೆ ಪದೆ ನಡೆಯುತ್ತಿರುವ ದೌರ್ಜನ್ಯದಿಂದ ತಾವು ಬೇಸತ್ತಿದ್ದು ಇನ್ನು ಮುಂದೆ ಊಗ್ರ ಹೋರಾಟ ನಡೆಸಲಾಗುವುದು ಅಲ್ಲದೇ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಕಾನೂನಾತ್ಮಕ ಹೋರಾಟವನ್ನು ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.  ಈ ಸಂದರ್ಭದಲ್ಲಿ ಚಾಂದೆಸಾಬ ಹಳಬ, ಇಸ್ಮಾಯಿಲಸಾಬ,ಫಾತಿಮಾಬಿ ಜಮಾದಾರ, ಫರಾಶಿ ಸಿದ್ದಿ, ಇಸ್ಮಾಯಿ ಮಾಪ್ಟೆಕರ, ಬುಡ್ಡೆಸಾಬ ಕಕ್ಕೇರಿ, ಶರಿಫ ಮುಜಾವರ, ಬಸಪ್ಪ ಬಾಳೆಕಾಯಿ, ನನ್ನೆಸಾಬ ಹವಾಲ್ದಾರ್ ಇತರರು ಇದ್ದರು.

watermarked IMG 20180713 133041 watermarked 13 hly 2 watermarked IMG 20180713 133212

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Trending Tagged With: ಅರಣ್ಯಾಧಿಕಾರಿಗಳ ದೌರ್ಜನ್ಯ, ಅರಣ್ಯಾಧಿಕಾರಿಗಳ ವಿರುದ್ದ ತೀವೃ ಆಕ್ರೋಶ, ಕಂದಾಯ ಸಚಿವರಿಗೆ, ಜಿಲ್ಲಾದಿಕಾರಿ, ದಾಖಲೆ ಪೂರೈಸಿದಲ್ಲಿ, ನಡೆಸಿದ ಬುಡಕಟ್ಟು, ನೇರವಾಗಿ ಆರೋಪಿಸಿ, ಬುಡಕಟ್ಟು, ಬುಡಕಟ್ಟು ಹಾಗೂ ಪಾರಂಪರಿಕ ಅರಣ್ಯ, ಬೆಳೆ ಹಾಳು, ಭೂಮಿ ಹಕ್ಕು ಮಾನ್ಯ, ಮಿನಿ, ರೈತರ ಮೇಲೆ ದೌರ್ಜನ್ಯ, ರೈತರು ಹಾನಿಗೊಳಗಾದ ಬೆಳೆ, ವಿದ್ಯಾಧರ ಗುಳಗುಳಿ, ವಿಧಾನ ಸೌಧದ ಎದುರು ಪ್ರತಿಭಟನೆ, ಸಾಂಬ್ರಾಣಿ ವಲಯದ ಬುಕ್ಕಿನಕೊಪ್ಪ ಗ್ರಾಮದ ರೇಣುಕಾ, ಸಿದ್ದಿ ಸಮುದಾಯದ ಜನತೆ, ಹಾನಿಗೊಳಗಾದ ಬೆಳೆಯೊಂದಿಗೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...