ಹಳಿಯಾಳ:- ತಾಲೂಕಿನ ತೇರಗಾಂವ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿಠ್ಠಲ ಮಲ್ಲಪ್ಪ ಬೆಣಚೇಕರ ನಿಧನಕ್ಕೆ ಸಚಿವ ಆರ್.ವಿ.ದೇಶಪಾಂಡೆ ಕಂಬನಿ ಮಿಡಿದಿದ್ದು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಕಚೇರಿ ಬೆಂಗಳೂರಿನಲ್ಲಿರುವ ಅವರು ಹಳಿಯಾಳ ಮಾಧ್ಯಮಕ್ಕೆ ಸಂತಾಪ ಸೂಚಿಸಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಹಿರಿಯ ಸ್ವಾತಂತ್ರ ಹೋರಾಟಗಾರರಾದ ವಿಠ್ಠಲ ಅವರು ಉತ್ತಮ ಕಲಾವಿದರಾಗಿದ್ದರು. ನಾಟಕಗಳ ನಿರ್ದೇಶಕರಾಗಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತೇರಗಾಂವ ಗ್ರಾಮದ ಸೋಸಾಯಿಟಿಯ ಅಧ್ಯಕ್ಷರೂ, ಗ್ರಾಮ ಕಮೀಟಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಹಾಗೂ ತೇರಗಾಂವ ಗ್ರಾಮದ ಮಾದರಿ ರೈತರೂ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕೂಡ ಆಗಿದ್ದರು ಎಂದಿರುವ ಸಚಿವರು ಅವರ ಅಗಲಿಕೆ ಸಾಕಷ್ಟು ನೋವು ತಂದಿದ್ದು ನಮ್ಮೆಲ್ಲರನ್ನು ಅಗಲಿದ ಅವರ ಆತ್ಮಕ್ಕೆ ಸರ್ವಶಕ್ತನಾದ ಭಗವಂತನು ಚಿರಶಾಂತಿಯನ್ನು ನೀಡಲಿ, ಅವರ ಕುಟುಂಬ ಸದಸ್ಯರೆಲ್ಲರಿಗೆ ಅವರ ಅಗಲಿಕೆಯಿಂದ ಉಂಟಾದ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
Leave a Comment