ಹೊನ್ನಾವರ ,ಕೆಲವು ವರ್ಷಗಳಿಂದ ಸ.ಹಿ.ಪ್ರಾ.ಶಾಲೆ, ಗುಂಡಬಾಳ ನಂ.2 ಶಾಲೆಯಲ್ಲಿ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾದ ಶಶಿರೇಖಾ ಜಿ. ಶೆಟ್ಟಿಇವರನ್ನು ಶಾಲೆಯ ಶಿಕ್ಷಕರು, ಎಸ್.ಡಿ.ಎಮ್.ಸಿ.ಮತ್ತುಊರ ನಾಗರಿಕರುಆತ್ಮೀಯವಾಗಿ ಬೀಳ್ಕೊಟ್ಟರು.ಹೊನ್ನಾವರ ,ಕೆಲವು ವರ್ಷಗಳಿಂದ ಸ.ಹಿ.ಪ್ರಾ.ಶಾಲೆ, ಗುಂಡಬಾಳ ನಂ.2 ಶಾಲೆಯಲ್ಲಿ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತರಾದ ಶಶಿರೇಖಾ ಜಿ. ಶೆಟ್ಟಿಇವರನ್ನು ಶಾಲೆಯ ಶಿಕ್ಷಕರು, ಎಸ್.ಡಿ.ಎಮ್.ಸಿ.ಮತ್ತುಊರ ನಾಗರಿಕರುಆತ್ಮೀಯವಾಗಿ ಬೀಳ್ಕೊಟ್ಟರು. ಶಾಲೆಯ ಮುಖ್ಯ ಶಿಕ್ಷಕರಾದ ಎಸ್. ಜಿ. ಭಟ್ಟರುಸ್ವಾಗತಿಸಿದರು.ಆಗಮಿಸಿದ ಗಣ್ಯರು ಮತ್ತು ಎಸ್.ಡಿ.ಎಮ್.ಸಿ.ಅಧ್ಯಕ್ಷರು, ಸದಸ್ಯರು, ಊರ ನಾಗರಿಕರು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಿವೃತ್ತರನ್ನು ಸನ್ಮಾನಿಸಿ ಬೀಳ್ಕೊಟ್ಟರು.ಅವರ ನಿವೃತ್ತಜೀವನ ಸುಖಮಯವಾಗಿರಲೆಂದು ಹಾರೈಸಿದರು.ಶಾಲಾ ಶಿಕ್ಷಕಿ ಸುಗೀತಾ ಭಟ್ಟಕಾರ್ಯಕ್ರಮ ನಿರೂಪಿಸಿ ಅಭಿನಂದನಾ ಪತ್ರ ವಾಚಿಸಿದರು.ಕಾರ್ಯಕ್ರಮದಲ್ಲಿಗ್ರಾ.ಪಂ. ಸದಸ್ಯೆ ಸುಧಾ ನಾಯ್ಕ, ಮಾರುತಿ ಪ್ರಭು, ಮಂಜುನಾಥ ಶೇಟ್ (ಎಸ್.ಡಿ.ಎಂ.ಸಿ.ಅಧ್ಯಕ್ಷರು) ಮತ್ತು ಸದಸ್ಯರು, ಊರಗಣ್ಯರು, ಪೋಷಕರು ಉಪಸ್ಥಿತರಿದ್ದರು. ಶಶಿರೇಖಾ ಜಿ. ಶೆಟ್ಟಿಇವರು ಶಾಲೆಗೆ ಕುಕ್ಕರ್ ಮತ್ತು ಫ್ಯಾನ್ಕೊಡುಗೆ ನೀಡಿದರು.
Leave a Comment