ಹೊನ್ನಾವರ : ತಾಲೂಕಿನ ಗುಂಡಬಾಳಾದ ಆರೋಗ್ಯಮಾತಾ ಪ್ರೌಢಶಾಲೆಯಲ್ಲಿ ಕಳೆದ 37 ವರ್ಷಗಳಿಂದ ಪರಿಚಾರಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ್ದ ಶ್ರೀ ಫೆಲಿಕ್ಸ್ ಫರ್ನಾಂಡಿಸ್ರವರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ವೃಂದದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಿ ಅವರ ವಿಶ್ರಾಂತ ಜೀವನಕ್ಕೆ ಶುಭ ಕೋರಿ ಬೀಳ್ಕೊಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರವಾರ ಡಾಯೋಸಿಸ್ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ವಂ. ಮುನ್ಸೆನ್ಯೂರ್ ಸೈಮನ್ ಟೆಲಿಸ್ರವರು ಮಾತನಾಡಿ ‘ಶಾಲೆಯೆಂಬ ವಾಹನಕ್ಕೆ ಶಿಕ್ಷಕರು ಗಾಲಿಗಳಾದರೆ, ಪರಿಚಾಲಕರು ಬೀಗದ ಕೀ ಇದ್ದಂತೆ, ಕೀಯಿಂದ ವಾಹನ ಸರಿಯಾಗಿ ಪ್ರಾರಂಭವಾದರೆ ವಿದ್ಯಾರ್ಥಿಗಳೆಂಬ ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯ’ ಎಂದರು,
ಮುಖ್ಯ ಅತಿಥಿಗಳಾಗಿ ಕೆ.ಡಿ.ಇ.ಎಸ್.ನ ಕಾರ್ಯದರ್ಶಿಗಳಾದ ವಂ. ಡಾ|| ವಲೇರಿಯನ್ ಸಿಕ್ವೇರಾ, ಶಾಲಾ ಸಂಚಾಲಕರಾದ ವಂ. ಫಾ|| ಎಡ್ವಿನ್ ಡಿ’ಸೋಜಾ, ವಂ. ಫಾ|| ಆ್ಯಂಟನಿ ರೊಡ್ರಿಗಸ್ ಹಾಗೂ ವಂ. ಸಿ|| ಸುಮನ್ರವರು ಉಪಸ್ಥಿತರಿದ್ದರು.
ಮುಖ್ಯಾಧ್ಯಾಪಕರಾದ ವಿಲ್ಸನ್ ಲೂಯಿಸ್ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ವೃಂದ ಹಾಗೂ ಪಾಲಕ-ಪೋಷಕರು ಹಾಜರಿದ್ದರು. ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಿಕ್ಷಕರದ ವಂ.ಫಾ|| ಬೆನ್ಸನ್ ಸ್ವಾಗತಿಸಿದರೆ, ಮಿಸ್ ಸ್ಟೆಲ್ಲಾರವರು ವಂದಿಸಿದರು. ಗಣಪತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Leave a Comment