ಹಳಿಯಾಳ:- ಬಸ್ ನಿಲ್ದಾಣ, ಶಾಲಾ ಕಾಲೇಜುಗಳ ಸಮೀಪ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಅನ್ಯಕೋಮಿನ ಯುವಕರು ಹಿಂದೂ ಯುವತಿಯರನ್ನು ಚುಡಾಯಿಸುತ್ತಿರುವ ಹಾಗೂ ಲವ್ ಜಿಹಾದ್ ಬಲೆಯಲ್ಲಿ ಬಿಳಿಸುತ್ತಿರುವ ಕೃತ್ಯಗಳು ನಡೆಯುತ್ತಿದ್ದು. ಕೂಡಲೇ ಇಂತಹವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ವಿಶ್ವಹಿಂದೂ ಪರಿಷದ್ ಹಾಗೂ ಭಜರಂಗದಳ ಸಂಘಟನೆಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ವಿಎಚ್ಪಿ ಭಜರಂಗಳದ ನೇತೃತ್ವದಲ್ಲಿ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಮನವಿ ಸಲ್ಲಿಸಿದರು.
ಮನವಿಯಲ್ಲಿ ಕಳೆದ 2 ದಿನಗಳ ಹಿಂದೆ ಹಳಿಯಾಳದಲ್ಲಿ ಒಂದು ಅನ್ಯಕೋಮಿನ ಯುವಕನಿಂದ ಲವ್ ಜಿಹಾದ್ನಲ್ಲಿ ಹಿಂದೂ ಯುವತಿಯನ್ನು ಬಿಳಿಸಿರುವ ಬಗ್ಗೆ ತಿಳಿಸಿದ್ದು. ಆ ಯುವತಿಯ ಹೆಸರನ್ನು ಪ್ರಸ್ತಾಪಿಸುವುದಿಲ್ಲ ಆದರೇ ಇಂತಹ ಅನೇಕ ಘಟನೆಗಳು ಹಳಿಯಾಳದಲ್ಲಿ ನಡೆಯುತ್ತಿವೆ. ಶಾಲಾ-ಕಾಲೇಜುಗಳ, ಬಸ್ ನಿಲ್ದಾಣ, ವಿವಿಧ ವೃತ್ತಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಈ ಪಡ್ಡೆ ಯುವಕರು ನಿಲ್ಲುತ್ತಿದ್ದು. ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದ್ದಾರೆ.
ಶೀಘ್ರ ಇಂತಹವರ ಮೇಲೆ ಕಾನೂನು ಕ್ರಮ ಕೈಗೊಂಡು ಮುಂದೆ ಆಗಬಹುದಾದ ಅನಾಹುತಗಳನ್ನು ತಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸುವಂತೆ ವಿನಂತಿಸಲಾಗಿದೆ.
ಮನವಿ ಸಲ್ಲಿಸುವಾಗ ಮುಖಂಡರಾದ ಆನಂದ ಕಂಚನಾಳಕರ, ಸರ್ವೇಶ ಕಾಂದೋಳಕರ, ಸಿದ್ದು ಶೆಟ್ಟಿ, ಆನಂದ ಕುಸನೂರು, ಶರತ ಶೆಟ್ಟಿ, ವಿನಾಯಕ ಗಿಂಡೆ, ಆದಿತ್ಯ, ಅಮೋಘ ನಾಯ್ಕೋಜಿ, ರಾಘವೇಂದ್ರ ಚಲವಾದಿ, ಸಂತೋಷ ಇತರರು ಇದ್ದರು.


Leave a Comment