ಹಳಿಯಾಳ: ಕರ್ನಾಟಕದ ಹಲವಾರು ಜಿಲ್ಲೆಗಳ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವ ಉದ್ಯೋಗ ಕೈಗೊಳ್ಳುವುದಕ್ಕಾಗಿ ಹಲವಾರು ರೀತಿಯ ಉಚಿತ ತರಬೇತಿಗಳನ್ನು ನೀಡುವ ಮೂಲಕ ಹಳಿಯಾಳದ ದೇಶಪಾಂಡೆ ಆರ್ಸೆಟಿ, ದೇಶದಲ್ಲಿಯೇ ಅತ್ಯುತ್ತಮ ತರಬೇತಿ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಹಳಿಯಾಳ ತಾಲೂಕು ಪಂಚಾಯತಿ ಎನ್ಆರ್ಎಲ್ಎಮ್ ಫೆಸಿಲಿಟೇಟರ್ ಕವಿತಾ ಕಲಾಲ ಹೇಳಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಹಳಿಯಾಳದಲ್ಲಿ 30 ದಿನಗಳ ಫೋಟೋಗ್ರಾಫಿ, ವಿಡಿಯೋಗ್ರಾಪಿ ಹಾಗೂ ಬ್ಯೂಟಿ ಪಾರ್ಲರ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಉಧ್ಘಾಟಿಸಿ ಮಾತನಾಡಿದರು. ತರಬೇತಿ ಪಡೆಯಲು ಬಂದಿರುವ ಶಿಬಿರಾರ್ಥಿಗಳು ತರಬೇತಿಯ ಸಂಪೂರ್ಣ ಲಾಭ ಪಡೆದು ಸ್ವ ಉದ್ಯೋಗ ಕೈಗೊಂಡು ಜೀವನದಲ್ಲಿ ಯಶಸ್ವಿಯಾಗುವಂತೆ ಕರೆ ನೀಡಿದರು.
ಸಂಸ್ಥೆಯ ನಿರ್ದೇಶಕ ನಿತ್ಯಾನಂದ ವೈದ್ಯ ಮಾತನಾಡಿ ಶಿಬಿರಾರ್ಥಿಗಳು ತರಬೇತಿಯಲ್ಲಿ ಕಲಿಸುವ ವಿಷಯಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ತರಬೇತಿ ಉಪನ್ಯಾಸಕಿ ಶಾಂತಾ ಜಮಾದಾರ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಉಪನ್ಯಾಸಕ ಕೆಂಪಣ್ಣಾ ಶೇಗುಣಸಿ ವಂದಿಸಿದರು.


Leave a Comment