ಹೊನ್ನಾವರ ,ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಹಿರಿಯ ನಾಗರಿಕರಿರನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸುವ ವಿನೂತನ ಕಾರ್ಯಕ್ರಮ ಗೇರುಸೊಪ್ಪಾದ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೊನ್ನಾವರ, ಗುತ್ತಿಕನ್ನಿಕಾಪರಮೇಶ್ವರಿ ಜ್ಞಾನವಿಕಾಸ ಕೇಂದ್ರ ಗೇರುಸೊಪ್ಪಾ, ಗುತ್ತಿಕನ್ನಿಕಾ ದೇವಾಲಯದ ಆಡಳಿತ ಮಂಡಳಿಯವರ ಸಂಯುಕ್ತ ಆಶ್ರಯದಲ್ಲಿ ಗ್ರಾಮದ 48 ಹಿರಿಯ ನಾಗರಿಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ದೇವಾಲಯದ ಆಡಳಿತ ಮಂಡಳಿಯವರಾದ ಗೋವಿಂದ ನಾಯ್ಕ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ ತೋಜನೆ ಪ್ರತಿಯೊಂದು ಕಾರ್ಯಕ್ರಮಗಳು ತುಂಬಾ ಸಂತೋಷವನ್ನು ನೀಡುವುದಲ್ಲದೇ ವೈಶಿಷ್ಟಪೂರ್ಣವಾಗಿರುತ್ತದೆ. ಯೋಜನೆಯ ಅಧ್ಯಕ್ಷರಾದ ಡಾ. ಡಿ.ವಿರೇಂದ್ರ ಹೆಗ್ಗಡೆಯವರು ಮಧ್ಯವರ್ಜನಶಿಬಿರ ಸ್ವಾಸ್ಯ ಸಂಕಲ್ಪದ ಕಾರ್ಯಕ್ರಮದ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಶ್ರಮ ವಹಿಸುತ್ತಿದ್ದಾರೆ. ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಸಂಘ ಸ್ಥಾಪಿಸಿ ಸ್ವಾವಲಂಭಿ ಜೀವನ ನಡೆಸುವಂತೆ ಮಾಡಿದ್ದಾರೆ. ಈ ದಿನ 48 ಹಿರಿಯರನ್ನು ಗುರುತಿಸಿ ವಿಶ್ವ ಹಿರಿಯ ನಾಗರಿಕ ದಿನಾಚರಣ ಯ ಪ್ರಯುಕ್ತ ಸನ್ಮಾನ ನಡೆಸಿ ಅವರು ನಡೆದು ಬಂದ ಹಾದಿಯನ್ನು ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ನಮ್ಮ ಮುಂದೆ ಯೋಜನೆ ಮೂಲಕ ತೋರಿಸಿದ್ದೀರಿ ಎಂದು ಯೋಜನೆ ಕಾರ್ಯಚಟುವಟಿಕೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಹೊನ್ನಾವರ ಭಟ್ಕಳ ತಾಲೂಕಿನ ಯೋಜನಾಧಿಕಾರಿ ಎಂ.ಎಸ್. ಈಶ್ವರ್ ಮಾತನಾಡಿ ಅವಿಭಕ್ತ ಕುಟುಂಬದಿಂದ ಇಂದು ನಾವು ವಿಭಕ್ತ ಕುಟುಂಬವೇ ಹೆಚ್ಚಾಗಿ ನಾವಿಂದು ನೋಡುತ್ತಿದ್ದೇವೆ. ಪ್ರತಿ ಭಾಗದಲ್ಲಿಯೂ ವಯಸ್ಸಾದವರನ್ನು ಅನಾಥಶ್ರಮಕ್ಕೆ ಸೇರಿಸುವ ಮೂಲಕ ಅವರನ್ನು ಅನಾಥರಾಗಿ ಮಾಡುತ್ತಾರೆ. ಆದರೆ ಅವರನ್ನು ನಾವು ಪ್ರೀತಿಯಿಂದ ಕಂಡರೆ ಮುಂದಿನ ತಲೆಮಾರಿನವರಿಗೆ ಸೂಕ್ತ ಮಾರ್ಗದರ್ಶಕರಾಗಿ ಅವರು ಹೊರಹೊಮ್ಮುತ್ತಾರೆ. ಅವರ ಅಪಾರ ಅನುಭವಗಳು ಇಂದಿನ ಪೀಳಿಗಿಗೇ ಸ್ಪೂರ್ತಿ ನೀಡುವಂತಹದು ಆ ನಿಟ್ಟಿನಲ್ಲಿ ಗ್ರಾಮಾಭಿವೃದ್ದಿ ಯೋಜನೆ ಇಂದು 48 ನಾಗರಿಕರನ್ನು ಗುರುತಿಸಿ ಗೌರವಿಸುವ ಜೊತೆ ಅವರ ಸಾಧನೆಯನ್ನು ನಿಮ್ಮ ಮುಂದೆ ತೋರಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
48 ಹಿರಿಯ ನಾಗರಿಕರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ನಗರಬಸ್ತಿಕೇರಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಅನ್ನಪೂರ್ಣ ಶಾಸ್ತಿ ಕಾರ್ಯಕ್ರಮದ ಕುರಿತು ಹರ್ಷ ವ್ಯಕ್ತಪಡಿಸಿದರು.
ವಲಯದ ಮೇಲ್ವಿಚಾರಕರಾದ ರತ್ನಾಕರ ಸ್ವಾಗತಿಸಿ ಸೇವಾಪ್ರತಿನಿಧಿ ಸುರೇಶ ವಂದಿಸಿದರು. ಜ್ಞಾನವಿಕಾಸ ಸಮನ್ವಾಯಿಧಿಕಾರಿ ನಾಗವೇಣ ಮತ್ತು ಸರಿತಾ ಕಾರ್ಯಕ್ರಮ ನಿರ್ವಹಿಸಿದರು.
ಪ್ರಗತಿಭಂಧು, ಸ್ವಸಹಾಯ ಸಂಘದ ಸದಸ್ಯರು, ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
Leave a Comment