ಹಳಿಯಾಳ:- ಕಳೆದ ವರ್ಷದ ಪ್ರತಿ ಟನ್ ಕಬ್ಬಿನ ಬಾಕಿ ಬಿಲ್ 305ರೂ ರೈತರ ಖಾತೆಗೆ ಜಮಾ ಮಾಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಬ್ಬು ಬೆಳೆಗಾರರು ಇಲ್ಲಿಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣ ಸತ್ಯಾಗ್ರಹ ಗುರುವಾರ 4ನೇ ದಿನ ಪೂರೈಸಿದೆ.
ಹಳಿಯಾಳದ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ರೈತರ ಬಾಕಿ ಹಣ 305ರೂ ಹಾಗೂ ಪ್ರಸಕ್ತ ಸಾಲಿನಲ್ಲಿ ಕಳುಹಿಸಿದ ಕಬ್ಬಿನ ಬಾಕಿ ಹಣವನ್ನು ನೀಡದೆ ರೈತರಿಗೆ ಮೊಸ ಮಾಡುತ್ತಿದೆ ಹಾಗೂ 2017-18ನೇ ಸಾಲಿಗೆ ಕಾರ್ಖಾನೆಗೆ ಕಳುಹಿಸಿದ ಕಬ್ಬಿನ ಹಣವನ್ನು ಎಪ್ರಿಲ್ 30 ರ ಒಳಗೆ ರೈತರಿಗೆ ನೀಡುವುದಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಒಪ್ಪಿಕೊಂಡಿದ್ದ ಕಾರ್ಖಾನೆ ಅಧಿಕಾರಿಗಳು ಈವರೆಗೆ ಹಣವನ್ನು ನೀಡದೆ ರೈತರಿಗೆ ಮೊಸ ಮಾಡುತ್ತಿದ್ದು ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಹಳಿಯಾಳ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಶಂಕರ ಕಾಜಗಾರ ತಿಳಿಸಿದರು.
ಹಳಿಯಾಳ ಕಬ್ಬು ಬೆಳೆಗಾರ ಸಂಘದವರ ನೇತೃತ್ವದಲ್ಲಿ ಕಾರ್ಖಾನೆ ವ್ಯಾಪ್ತಿಯ ಧಾರವಾಡ, ಕಿತ್ತೂರು ಕಲಘಟಗಿ, ಮುಂಡಗೋಡ, ದಾಂಡೇಲಿ, ಹಳಿಯಾಳ ಹಾಗೂ ಅಳ್ನಾವರ ಭಾಗದ ರೈತರು ಪ್ರತಿದಿನ ಧರಣ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಿದ್ದು. ಕಾರ್ಖಾನೆ ಎದುರು ಹಾಕಿರುವ ಪೆಂಡಾಲನಲ್ಲಿ ರೈತರು ವಿವಿಧ ಹೋರಾಟದ ಜನಪದ ಹಾಡು, ಭಜನೆಗಳ ಮೂಲಕ ಕಾರ್ಖಾನೆಯ ರೈತ ವಿಧೋಧ ನೀತಿಯನ್ನು ಅಣಕಿಸುತ್ತಿರುವುದು ಸಾಮಾನ್ಯವಾಗಿದೆ.
ರೈತರು ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣ ಸತ್ಯಾಗ್ರಹದ ಖರ್ಚುವೆಚ್ಚಗಳಿಗಾಗಿ ರೈತರು ರೈತರಿಂದಲೇ ಕರ ಸಂಗ್ರಹಿಸಿ ಹೊರಾಟದ ನೇತೃತ್ವ ವಹಿಸಿದವರಿಗೆ ತಲುಪಿಸುತ್ತಿದ್ದು. ಪ್ರತಿದಿನ ತಾಲೂಕಿನ 2 ಹಳ್ಳಿಗಳಿಂದ ರೈತರು ಧರಣ ಯಲ್ಲಿ ಪಾಲ್ಗೊಳ್ಳುತ್ತಿದ್ದು. ದಿ.10ರಂದು ಬಿ.ಕೆ.ಹಳ್ಳಿ ಹಾಗೂ ತತ್ವಣಗಿ ಗ್ರಾಮಗಳಿಂದ ರೈತ ಮಹಿಳೆಯರು ಸಹ ಧರಣ ಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಯುವ ರೈತ ಮುಖಂಡ ಕುಮಾರ ಬೋಬಾಟಿ ತಿಳಿಸಿದರು.
ಧರಣ ಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ಮುಖಂಡರಾದ ಜಿ.ಆರ್.ಪಾಟಿಲ್, ಸುರೇಶ ಶಿವಣ್ಣವರ, ಶಿವಪುತ್ರ ನುಚ್ಬಂಬ್ಲಿ, ಲಕ್ಷ್ಮಣ ಗೌಡಾ, ರಾಮದಾಸ ಬೆಳಗಾಂವಕರ, ಶ್ರೀಕಾಂತ ಮಿರಾಶಿ, ಕಲಘಟಗಿ ಭಾಗದ ಸುರೇಶ ಅರಕಸಾಲಿಮಠ,ಸಹದೇವ ಉಗನಿಕೇರಿ, ಯಲ್ಲಪ್ಪಾ ಹರಿಜನ, ಬಸವರಾಜ, ಸುಬಾಶ ಮುದಿಗೌಡರ ಇತರರು ಇದ್ದರು.

Leave a Comment