• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆ

August 10, 2018 by Gaju Gokarna Leave a Comment

ಹೊನ್ನಾವರ: ತಾಲೂಕ ಪಂಚಾಯತ ಸಭಾಭವನದಲ್ಲಿ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಸಾಮನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆ ನಡೆಯಿತು.

ಶಿಕ್ಷಣ ಇಲಾಖೆ ಕುರಿತ ಚರ್ಚೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಶ್ ಪದಕಿ ಮಾತನಾಡಿ ವೆಬ್ ಪೊರ್ಟಲ್ ಮೂಲಕ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಕುರಿತ ಮಾಹಿತಿ ಒದಗಿಸುವ ಕಾರ್ಯ ನಡೆಯುತ್ತಿದೆ ಎಂದರು. ಅಲ್ಲದೇ ಇನ್ನೊಂದು ವಾರದ ಅವಧಿಯೊಳಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆಯು ಯಾವುದೇ ಒತ್ತಡಕ್ಕೆ ಆಸ್ಪದವಿರದೆ ಪಾರದರ್ಶಕವಾಗಿರಲಿದೆ. ಮೂಲಭೂತ ಸೌಕರ್ಯಗಳ ಕೊರತೆ ಇರುವ ಶಾಲೆಗಳನ್ನು ಪಟ್ಟಿಮಾಡಿ ಶಿಘ್ರದಲ್ಲಿ ಕ್ರಿಯಾ ಯೋಜನೆ ರೂಪಿತವಾಗುವುದು ಎಂದು ಸಭೆಗೆ ತಿಳಿಸಿದರು.
ಕೃಷಿ ಇಲಾಖೆ ಸಂಭಂದಿತ ಚರ್ಚೆಯಲ್ಲಿ ರೈತರಿಗೆ ತಮ್ಮ ಬೆಳೆಗಳಿಗೆ ಕಿಟನಾಶಕ ಹಾಗೂ ಗೊಬ್ಬರದ ಪೂರೈಕೆ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಚರ್ಚೆಯಲ್ಲಿ ಮಾಹಿತಿ ನೀಡಿ ಚಂಡಮಾರುತದಿಂದ ಹಾನಿಯಾಗುವ ಅಧ್ಯಯನದ ಕುರಿತಂತೆ ಮಂಕಿಯಲ್ಲಿ ಸೈಕ್ಲೊನ್ ಸೆಂಟರ್ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಇನ್ನು ಸಾರಿಗೆ ಇಲಾಖೆ ಸಂಬಂದಿತ ಚರ್ಚೆ ಬಂದಾಗ ಇಲಾಖಾ ಅಧಿಕಾರಿಗಳೊಂದಿಗೆ ಸದಸ್ಯ ಆರ್.ಪಿ ನಾಯ್ಕ ಮಾತನಾಡಿ ವಿದ್ಯಾರ್ಥಿಗಳಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಹಡಿನಬಾಳಕ್ಕೆ ಬೆಳಿಗ್ಗೆ 8 ಘಂಟೆ ಹಾಗೂ 9 ಘಂಟೆ ಸಮಯದಲ್ಲಿ ಬಸ್ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳಿಗೆ ಅನೂಕೂಲ ಮಾಡಿಕೊಡಿ ಎಂದರು. ಅಧಿಕಾರಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಸೂಚಿಸಿದರು.
ಕಂದಾಯ ಇಲಾಖೆ ಕುರಿತ ಚರ್ಚೆ ಬಂದಾಗ ಕೆಲ ಸದಸ್ಯರು ಇಲಾಖಾ ಅಧಿಕಾರಿಗಳೊಂದಿಗೆ ಮಾತನಾಡಿ ಆರ್.ಟಿ.ಸಿಯಲ್ಲಿ ಅಡಿಕೆ,ತೆಂಗು ಬೆಳೆ ಎಂಟ್ರಿ ಹಾರಿಹೊಗುತ್ತಿರುವುದು ಎಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಅಧ್ಯಕ್ಷ ಉಲ್ಲಾಸ ನಾಯ್ಕ ಕಂದಾಯ ಇಲಾಖಾ ಅಧಿಕಾರಿಗಳಿಗೆ ತಿಳಿಸಿ ಇಂತಹ ತಪ್ಪುಗಳು ಇಲಾಖೆಗೆ ಶೋಭೆ ತರುವುದಿಲ್ಲ, ಮತ್ತೆ ಇಂತಹ ತಪ್ಪುಗಳು ನಡೆಯದರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದು ತಾಕೀತು ಮಾಡಿದರು.
ಸಣ್ಣ ನೀರಾವರಿ ಮತ್ತು ಅಬಕಾರಿ ಇಲಾಖಾ ಅಧಿಕಾರಿಗಳು ಸಭೆಗೆ ಸತತ ಗೈರು ಹಾಜರಿ ಉಳಿಯುತ್ತಿರುವದಕ್ಕೆ ಸದಸ್ಯರು ಸಿಟ್ಟಿಗೆದ್ದು ಅದ್ಯಕ್ಷ ಉಲ್ಲಾಸ ನಾಯ್ಕ ಅವರನ್ನು ಪ್ರಶ್ನಿಸಿದರು.ಪ್ರಶ್ನೆಗೆ ಪ್ರತಿಯಾಗಿ ಅಧ್ಯಕ್ಷ ಉಲ್ಲಾಸ ನಾಯ್ಕ ಪ್ರತಿಕ್ರಿಯಿಸಿ, ಕಳೆದ ಎರಡು ಮೂರು ಬಾರಿ ಸಭೆಯಲ್ಲಿ ಕೆಲ ಇಲಾಖೆಯ ಅಧಿಕಾರಿಗಳು ಸತತವಾಗಿ ಗೈರು ಹಾಜರಿ ಇರುತ್ತಿದ್ದಾರೆ. ಈ ಬಗ್ಗೆ ಆಯಾ ಇಲಾಖಾ ಅಧಿಕಾರಿಗಳಿಗೆ ದೂರವಾಣ ಮೂಲಕ ಸಂಪರ್ಕಿಸಿದ್ದೇನೆ ಸಭೆಗೆ ಬರುವ ಬಗ್ಗೆ ತಿಳಿಸಿದ À ಅವರು ಇಂದು ಸಭೆಗೆ ಬಂದಿಲ್ಲ ಸಭೆ ಆರಂಭದವಾದಗ ಕರೆಮಾಡಿದರು ಕೆಲಸದ ಒತ್ತಡದ ಸಬೂಬು ಹೇಳಿ ಸಭೆಗೆ ಬರುವುದರಿಂದ ನುಣುಚಿಕೊಂಡಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.ಈ ವೇಳೆ ಸದಸ್ಯ ಅಣ್ಣಯ್ಯ ನಾಯ್ಕ ಆಕ್ರೋಶಿತರಾಗಿ, ತಾಲೂಕಾ ಪಂಚಾಯತ್‍ವೇ ಇದಕ್ಕೆ ಹೊಣೆಯಾಗಿದೆ ಅದ್ಯಕ್ಷರೇ ನೀವು ಇದರ ಜವಾಬ್ದಾರಿ ಹೊರಬೇಕು,ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸದಸ್ಯರೆಲ್ಲರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ.ತಾ.ಪಂ.ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ.ಕೆಲ ಸಮಸ್ಯೆಗಳಿಗೆ ಪ್ರಶ್ನಿಸಬೇಕಿದ್ದ ಅಬಕಾರಿ ಇಲಾಖೆ, ಚಿಕ್ಕನೀರಾವರಿ ಇಲಾಖೆ ಅಧಿಕಾರಿಗಳು ಹಾಜರಿಲ್ಲದಿದ್ದರೆ ಯಾರಲ್ಲಿ ಸಾರ್ವಜನಿಕರ ಸಮಸ್ಯೆ ಪರಿಶೀಲನೆ ನಡೆಸಬೇಕು ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಲಲಿತಾ ನಾಯ್ಕ, ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ನಾಯ್ಕ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಖಾಜಿ ಮಹಮದ್ ಇರಶಾದ್, ಸೇರಿದಂತೆ ಸದಸ್ಯರು,ವಿವಿಧ ಇಲಾಖಾ ಅಧಿಕಾರಿಗಳು ಉಪಸ್ದಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಅಡಿಕೆ, ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆ, ಅಬಕಾರಿ ಇಲಾಖಾ ಅಧಿಕಾರಿಗಳು ಸಭೆಗೆ ಸತತ ಗೈರು ಹಾಜರಿ, ಆಕ್ರೋಶಿತರಾಗಿ, ಆರ್.ಟಿ.ಸಿ, ಕಿಟನಾಶಕ, ಕೃಷಿ ಇಲಾಖೆ ಸಂಭಂದಿತ ಚರ್ಚೆ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಶ್ ಪದಕಿ, ಗೊಬ್ಬರದ ಪೂರೈಕೆ, ತಾಲೂಕಾ ಪಂಚಾಯತ್, ತೆಂಗು ಬೆಳೆ ಎಂಟ್ರಿ, ಪಂಚಾಯತ ಸಭಾಭವನ, ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆ, ವೆಬ್ ಪೊರ್ಟಲ್, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ, ಸಾಮನ್ಯ ಸಭೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,022 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar