ಹೊನ್ನಾವರ ಹೋಲಿ ರೋಸರಿ ಪಿಯು ಕಾಲೇಜಿನ ಸಂಸತ್ತು ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಅತಿಥಿಗಳನ್ನು ಶಾಲಾ ವಾದ್ಯದ ಮೂಲಕ ಸ್ವಾಗತಿಸಲಾಯಿತು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಹಾಜರಿದ್ದ ರೆವರೆಂಡ್ ಫಾದರ್ ರಿಚರ್ಡ್ ರೊಡ್ರಿಗಿಸ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ ಪ್ರಸಿದ್ಧ ನಾಯಕರ ಬಗ್ಗೆ ಪ್ರಸ್ತಾಪಿಸಿದರು. ಮಹಾತ್ಮಾಗಾಂಧಿ ಹಾಗೂ ಗೂಗಲ್ ಸಂಸ್ಥೆಯ ಸಿಇವೊ ಹಾಗೂ ಇತರ ಗಣ್ಯರ ಹೆಸರನ್ನು ಉಲ್ಲೇಖಿಸುತ್ತಾ ಒಬ್ಬ ಮುಖಂಡ ಹೇಗಿರಬೇಕು. ಜೀವನದಲ್ಲಿ ಹೇಗೆ ಬೆಳೆಯಬೇಕು ಎಂಬುದನ್ನು ವಿವರಿಸುತ್ತಾ ಸಲಹೆ ನೀಡಿದರು. ಪ್ರಾಚಾರ್ಯೆ ಸಿ. ಶೀಲಾ ಕುಮಾರಿ ಮಾತನಾಡಿ ವಿದ್ಯಾರ್ಥಿಗಳು ತಮ್ಮಲ್ಲಿ ಒಳ್ಳೆಯ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು, ಇದು ಇಂದೇ ತಮ್ಮ ಮನೆಯಿಂದಲೇ ಪ್ರಾರಂಭವಾಗಬೇಕು, ಜೀವನದಲ್ಲಿ ಒಳ್ಳೆಯ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು, ಒಬ್ಬ ಮುಖಂಡ ಸೇವಕನಂತೆ ಪ್ರಾಮಾಣ ಕವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕುಮಾರಿ ಆಪ್ಸಿನ್ ಸ್ವಾಗತಿಸಿದರೆ, ಕುಮಾರಿ ಜೆಸಿಂತಾ ಹಾಗೂ ಸ್ಟೆಲಿಟಾ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾಡಿ ಪ್ರಾನ್ಸಿಟಾ ಫರ್ನಾಂಡಿಸ್ ವಂದಿಸಿದರು.
Leave a Comment