ಹೊನ್ನಾವರ: ದೇಶಕಂಡ ಅಪ್ರತಿಮ ನಾಯಕ, ಕವಿ ಹೃದಯದ ಚತುರ ವಾಗ್ಮಿ ಅಗಲಿದ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರಿಗೆ ಅಭಿಮಾನಿ ಬಳಗದ ಆಶ್ರಯದಲ್ಲಿ ಹೊನ್ನಾವರ ಪಟ್ಟಣದ ನ್ಯೂ ಇಂಗ್ಲೀಷ್ ಶಾಲಾ ಸಭಾಭವನದಲ್ಲಿ À ಶ್ರದ್ದಾಂಜಲಿ ಸಭೆ ನಡೆಯಿತು.
ವೇದಿಕೆಯಲ್ಲಿನ ಮಾಜಿ ಶಾಸಕ ಡಾ. ಎಂ.ಪಿ.ಕರ್ಕಿ, ಡಾ. ಎ.ಬಿ.ಕಾರ್ಕಳ, ಜಗದೀಶ ಪೈ, ಬಿ.ಡಿ.ಫರ್ನಾಂಡೀಸ್, ಡಾ. ಇಸ್ಮಾಯಿಲ್ ತಲಖಣಿ, ಎಂ.ಜಿ. ನಾಯ್ಕ, ವಿ. ಹೆಚ್. ಕರ್ಕಿಕರ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಚಿಸಿ ನಮನ ಸಲ್ಲಿಸಿದರು.
ಎ.ಬಿ.ಕಾರ್ಕಳ ಮಾತನಾಡಿ ವಾಜಪೇಯಿಯವರ ವ್ಯಕ್ತಿತ್ವ ಮೌಂಟ್ ಎವರೆಸ್ಟ್ ಶಿಖರ ಇದ್ದ ಹಾಗೆ. ಅಭೂತಪೈರ್ವ ವ್ಯಕ್ತಿತ್ವ. ಆದರ್ಶ ವ್ಯಕ್ತಿ ಎಂದರು.
ಜಗದೀಶ ಪೈ ಮಾತನಾಡಿ ಅವರು 10-15 ವರ್ಷವಾದರೂ ಪ್ರಧಾನಿಯಾಗಿರಬೇಕಿತ್ತು. ಅಮೂಲ್ಯರತ್ನವನ್ನು ಕಳೆದುಕೊಂಡಿದ್ದೇವೆ ಎಂದರು.
ಬಿ.ಡಿ.ಫರ್ನಾಂಡೀಸ್ ಮಾತನಾಡಿ ವಾಜಪೇಯಿ ಮಹಾಶಕ್ತಿ ಎಂದರು.ವಿ.ಹೆಚ್. ಕರ್ಕಿಕರ ಮಾತನಾಡಿ ಭಾರತ ಶಕ್ತಿ ಮಹಾನ್ ದೇಶ ಎಂದು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಶಕ್ತಿ ಅವರು ಎಂದರು.
ಎಂ.ಜಿ.ನಾಯ್ಕ ಮಾತನಾಡಿ ಹೊನ್ನಾವರದಲ್ಲಿ ಅವರು ಮಾಡಿದ ಭಾಷಣದಿಂದ ಪ್ರಭಾವಿತನಾಗಿದ್ದೇನೆ ಎಂದರು. ಅವರ ರಾಷ್ಟ್ರ ಭಕ್ತಿ ತುಂಬಿದ ಭಾಷಣಗಳು ನಮುಗೆ ಆದರ್ಶಪ್ರಾಯವಾದವು ಎಂದು ಸ್ಮರಿಸಿದರು.
ದಿನೇಶ ಕಾಮತ, ಜಿ.ಎಸ್.ರೇವಣಕರ, ಬಾಲಕೃಷ್ಣ ಪೈ, ಪತಂಜಲಿ ವೀಣಾಕರ ನುಡಿನಮನ ಸಲ್ಲಿಸಿ ಮಾತನಾಡಿದರು. ರಾಜು ಭಂಡಾರಿ. ಸ್ಪೀಫನ್ ರೊಡ್ರಗೀಸ್, ರಘು ಪೈ, ವಿಜು ಕಾಮತ ಮತ್ತಿತರರು ಉಪಸ್ಥಿತರಿದ್ದರು.ಮೌನ ಆಚರಿಸಿ ಶೃದ್ದಾಂಜಲಿ ಅರ್ಪಿಸಲಾಯಿತು.
ಶಾಸಕರ ಕಚೇರಿಯಲ್ಲಿ ಶೃದ್ದಾಂಜಲಿ: ಅಗಲಿದ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರಿಗೆ ಹೊನ್ನಾವರ ಪಟ್ಟಣದ ಶಾಸಕ ಸುನೀಲ ನಾಯ್ಕ ಕಚೇರಿಯಲ್ಲಿ ಹಾಗೂ ಶಾಸಕ ದಿನಕರ ಶೆಟ್ಟಿ ಕಚೇರಿಯಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು.ಬಿಜೆಪಿ ಕಾರ್ಯಕರ್ತರು, ಮುಖಂಡರು ವಾಜಪೇಯಿಯವರ ಭಾವ ಚಿತ್ರಕ್ಕೆ ಪುಷ್ರ್ಪ ನಮನ ಸಲ್ಲಿಸಿದರು.
ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ಸುಬ್ರಾಯ ನಾಯ್ಕ, ಎಂ.ಜಿ. ನಾಯ್ಕ, ರಾಜು ಭಂಡಾರಿ, ವಿಘ್ನೇಶ ಹೆಗಡೆ,ರಮೇಶ ನಾಯ್ಕ, ಜಗದೀಶ ನಾಯ್ಕ, ವಿಲಿಯಂ ಅಲ್ಮೇಡಾ, ಎಂ.ಎಸ್.ಹೆಗಡೆ ಮತ್ತಿತರರು ಪುಷ್ಪ ನಮನ ಸಲ್ಲಿಸಿದರು. ನಂತರ ಮೌನ ಆಚರಿಸಿ ಶ್ರದ್ದಾಂಜಲಿ ಅರ್ಪಿಸಲಾಯಿತು.
Leave a Comment