ಬೆಂಗಳೂರು, ಆಗಸ್ಟ್ 23, 2018- ಕಾಂಗ್ರೆಸ್ಸಿನ ಹಿರಿಯ ನಾಯಕ ಗುರುದಾಸ್ ಕಾಮತ್ ಅವರ ಹಠಾತ್ ನಿಧನದಿಂದ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ನಷ್ಟವುಂಟಾಗಿದೆ ಎಂದು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಶೋಕಿಸಿದ್ದಾರೆ.
“ಕಾಮತ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ನಮ್ಮವರೇ ಆಗಿದ್ದರು. ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಹಾಗೂ ಪಕ್ಷವು ನಡೆಸಿಕೊಂಡು ಬಂದಿದ್ದ ಹಲವು ಹೋರಾಟಗಳಲ್ಲಿ ಕಾಮತರು ಮುಂಚೂಣಿಯಲ್ಲಿದ್ದರು,’’ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ.
“ಕಾಮತ್ ಅವರ ಸೇವೆ ಪಕ್ಷಕ್ಕೆ ಇನ್ನೂ ದೀರ್ಘಕಾಲ ಅಗತ್ಯವಾಗಿ ಬೇಕಾಗಿತ್ತು. ಆದರೆ, ಅವರು ಹಠಾತ್ತನೆ ನಿಧನರಾಗಿದುದು ಪಕ್ಷದಲ್ಲೊಂದು ಶೂನ್ಯವನ್ನು ಸೃಷ್ಟಿಸಿದೆ. ತಾವು ವಹಿಸಿಕೊಂಡ ಯಾವುದೇ ಜವಾಬ್ದಾರಿಯನ್ನು ಅವರು ತ್ರಿಕರಣಪೂರ್ವಕವಾಗಿ ನಿರ್ವಹಿಸುತ್ತಿದ್ದ ವ್ಯಕ್ತಿಯಾಗಿದ್ದರು,’’ ಎಂದು ದೇಶಪಾಂಡೆ ನೆನಪಿಸಿಕೊಂಡಿದ್ದಾರೆ.
Leave a Comment