ಹೊನ್ನಾವರ ವಿವಿಧ ಶಾಲೆಗಳಲ್ಲಿರುವ ಸೇವಾದಳ ಶಾಖೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು,ತ್ಯಾಗ ಮತ್ತು ದೇಶಭಕ್ತಿಯನ್ನು ಕಲಿಸುತ್ತಾ, ಆದರ್ಶ ವ್ಯಕ್ತಿತ್ವದ ನಾಗರಿಕರನ್ನಾಗಿ ರೂಪಿಸುವ ಕೆಲಸ ಮಾಡುತ್ತಿವೆ. ಇದರ ಹಿನ್ನೆಲೆಯಲ್ಲಿ ಶಾಖಾ ನಾಯಕ-ನಾಯಕಿಯರಾದ ಶಿಕ್ಷಕ/ಶಿಕ್ಷಕಿಯರ ಪಾತ್ರ ದೊಡ್ಡದು” ಎಂದು ಕಾರವಾರ ಶೈಕ್ಷಣಿಕ ಜಿಲ್ಲಾ ಭಾರತಸೇವಾದಳದ ಅಧ್ಯಕ್ಷರಾದ ಯೋಗೆಶ್ ಆರ್.ರೈಕರ್ ನುಡಿದರು. ಅವರು ಭಾರತ ಸೇವಾದಳದ ತಾಲೂಕಾ ಪುನಃಶ್ಚೇತನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಭ್ಯಾಗತರಾದ ಕ್ಷೇತ್ರಶಿಕ್ಷಣಾಧಿಕಾರಿ ಗಿರೀಶ ಪದಕಿಯವರು ವಾರ್ಷಿಕ ಕ್ರಿಯಾಯೋಜನೆ ಹಾಗೂ ನಾಡಗೀತ-ರಾಷ್ಟ್ರಗೀತೆಗಳ ಸಿ.ಡಿ ಬಿಡುಗಡೆ ಮಾಡಿದರು. ಭಾರತ ಸೇವಾದಳ ನಾಡಿನ ವಿಮೋಚನಾ ಸಮರದಲ್ಲಿ ವಹಿಸಿದ ಪಾತ್ರ ನಾ.ಸು.ಹರ್ಡಿಕರರು ಖಾದಿ ಆಂದೋಲನ, ಸ್ವದೇಶಿವಸ್ತುಗಳ ಬಳಕೆ ಜನಪ್ರಿಯಗೊಳಿಸಲು ಶ್ರಮಿಸಿದ್ದನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ತಾಲೂಕಸಮಿತಿ ಅಧ್ಯಕ್ಷರಾದ ವಾಮನ ಎಸ್. ನಾಯ್ಕ ಮಾತನಾಡಿ“ಸೇವಾದಳದಲ್ಲಿ ಹತ್ತು ವಷರ್Àದಿಂದ ಸೇವೆಸಲ್ಲಿಸುತ್ತಿರುವ ಶಾಖಾನಾಯಕ ನಾಯಕಿ ಯರಿಗೆ ವಿಶೇಷ ಭತ್ತೆ ನೀಡುವಂತೆ ಸರಕಾರಕ್ಕೆ ವಿನಂತಿಸಲಾಗಿದೆ. ಹಾಗೇ ಮೂರುವರ್ಷದ ತರಬೇತಿ ಪಡೆದ ಸ್ವಯಂ ಸೇವಕರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸ್ಥಾನ ಕಾದಿರಿಸುವಂತೆ ಮಾಡುವ ಪ್ರಯತ್ನ ನಡೆದಿದೆ. ಶಾಖಾ ನಾಯಕರು ಕ್ರಿಯಾಯೋಜನೆಯಂತೆ ಸಂಘಟನೆಯಲ್ಲಿ ಚಟುವಟಿಕೆ ನಡೆಸಬೇಕು” ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪತ್ರಾಂಕಿರತ ದೈಹಿಕ ಶಿಕ್ಷಣ ಅಥೀಕ್ಷಕರಾದ ಎಸ್.ಎನ್.ಗೌಡರವರು ವೃತ್ತಿಯಿಂದ ನಿವೃತ್ತರಾಗುತ್ತಿರುವ ಸಂದರ್ಭದಲ್ಲಿ ಅವರನ್ನು ಶಾಲು ಹೊದಿಸಿ, ನೆನಪಿನಕಾಣಿಕೆ ನೀಡಿ ಸನ್ಮಾನಿಸಲಾಯಿತು. ತಾಲೂಕಾ ಸಂಘಟಕ ಸುರೇಶ್ ತಾಂಡೇಲರ ಪಿಎಚ್.ಡಿ ಸಾಧನೆಗಾಗಿ ಸನ್ಮಾನಿಸಲಾಯಿತು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎನ್.ಎಸ್.ನಾಯ್ಕ, ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ್ ನಾಯ್ಕ ,ತಾಲೂಕಾ ಸಮಿತಿ ಸದಸ್ಯರಾದ ಅಣ್ಣಪ್ಪ ನಾಯ್ಕ ಶುಭಕೋರಿ ಮಾತನಾಡಿದರು. ಮಾಧ್ಯಮಿಕ ಶಾಲಾ ನೌಕರ ಸಂಘದ ಅಧ್ಯಕ್ಷರಾದ ಎಂ.ಎಸ್.ಸಂತೋಷಕುಮಾರ, ಭಾ ಸೇವಾದಳ ತಾಲೂಕಾ ಸಮಿತಿ ಸದಸ್ಯ ಐ . ವಿ.ನಾಯ್ಕ, ಮೋಹನ್ ನಾಯ್ಕ, ದೈ.ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಸಾದನಾ ಬರ್ಗಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಪ್ರಾಸ್ತಾವಿಕವಾಗಿಕ ಮಾತನಾಡಿದರು. ತಾಲೂಕ ಕಾರ್ಯದರ್ಶಿ ಉದಯ ಆರ್. ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಗಜಾನನ ನಾಯ್ಕ ವಂದಿಸಿದರು. ಸಹಾಕಾರ್ಯದರ್ಶಿ ವಿದ್ಯಾ ಹೆಗಡೆ ಉಪಸ್ಥಿತರಿದ್ದರು.
Leave a Comment