ಹೊನ್ನಾವರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ಪಟ್ಟಣದ ಬಂದರಿನಲ್ಲಿ ಶರಾವತಿ ನದಿಯಲ್ಲಿ ಶನಿವಾರ ವಿಸರ್ಜಿಸಲಾಯಿತು.
ಬೆಳಿಗ್ಗೆ ಕುಮಟಾದಿಂದ ಅಸ್ಥಿಭಸ್ಮದ ಕಳಸವನ್ನು ಹೊನ್ನಾವರಕ್ಕೆ ತರಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶರಾವತಿ ವೃತ್ತಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ದಿನಕರ ಶೆಟ್ಟಿ, ಸುನೀಲ ನಾಯ್ಕ, ರೂಪಾಲಿ ನಾಯ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ ಮಾಜಿ ಪ್ರಧಾನಿ ವಾಜಪೇಯಿಯವರು ಪಕ್ಷಾತೀತವಾಗಿ ಗೌರವಕ್ಕೆ ಪಾತ್ರರಾಗಿದ್ದರು. ಜನಮಾನಸಲ್ಲಿ ಸದಾ ನೆನಪಿಡುವ ಕಾರ್ಯಗಳನ್ನು ಮಾಡಿದ್ದಾರೆ. ಅವರ ದೇಶಪ್ರೇಮವನ್ನು ಎಲ್ಲರೂ ಬೆಳೆಸಿಕೊಳ್ಳೋಣ ಎಂದರು.
ನಂತರ ನದಿತೀರದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ವೈದಿಕರಾದ ಸದಾನಂದ ಭಟ್, ಕರ್ಕಿಯ ವಿನಾಯಕ ಭಾರಧ್ವಾಜ, ನಾಗರಾಜ ಭಾಗ್ವತ ಅವರ ಮುಖಾಂತರ ವಿಧಿವಿಧಾನಗಳನ್ನು ನೆರವೇರಿಸಿ ಶರಾವತಿ ನದಿಯಲ್ಲಿ ಅಸ್ಥಿ ವಿಸರ್ಜನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಾ. ಎಂ.ಪಿ.ಕರ್ಕಿ, ಶಾಸಕ ಸುನೀಲ ಹೆಗಡೆ, ಬಿಜೆಪಿ ಮುಖಂಡರಾದ ಉಮೇಶ ನಾಯ್ಕ, ಎಂ.ಜಿ.ನಾಯ್ಕ, ಕಾಸ್ಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಈಶ್ವರ ನಾಯ್ಕ, ಕಮಲಾಕರ ಮೇಸ್ತ, ವೆಂಕಟ್ರಮಣ ಹೆಗಡೆ, ವೆಂಕಟೇಶ ನಾಯ್ಕ, ರಾಜೇಶ ನಾಯಕ, ಎನ್.ಎಸ್.ಹೆಗಡೆ, ಸುಬ್ರಾಯ ನಾಯ್ಕ, ರಾಜು ಭಂಡಾರಿ, ಗಣೇಶ ಪೈ, ವಿಘ್ನೇಶ ಹೆಗಡೆ, ಗಣಪತಿ ಗೌಡ, ಜಯಂತಿ ನಾಯ್ಕ, ಕುಮಾರ ಮಾರ್ಕಂಡೇಯ, ಮಹೇಶ ಮೇಸ್ತ, ವಿಜು ಕಾಮತ್, ದತ್ತಾತ್ರೆಯ ಮೇಸ್ತ, ಶ್ರೀಧರ ನಾಯ್ಕ ಉಪಸ್ಥಿತರಿದ್ದರು.
Leave a Comment