• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ರೈತರ ಧರಣಿ ಸತ್ಯಾಗ್ರಹ 24 ನೇ ದಿನಕ್ಕೆ ,ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಭೇಟಿ ಧರಣಿ ಹಿಂಪಡೆಯುವಂತೆ ಮನವಿ

August 28, 2018 by Yogaraj SK Leave a Comment

 kabu belegar raitrara dharani 24th day, Tahsildar visited

ಹಳಿಯಾಳ:- 2016-17ನೇ ಸಾಲಿಗೆ ಪೂರೈಸಿದ ಕಬ್ಬಿನ ಬಾಕಿ ಬಿಲ್ ಪ್ರತಿ ಟನ್‍ಗೆ 305ರೂ. ನೀಡುವಂತೆ ಆಗ್ರಹಿಸಿ ಹಳಿಯಾಳ ಕಬ್ಬು ಬೆಳೆಗಾರರು ಅಗಸ್ಟ ದಿ.6 ರಿಂದ ಆರಂಭಿಸಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ 23 ದಿನ ಪೂರೈಸಿದ್ದು ದಿ.29 ಬುಧವಾರದಂದು 24ನೇ ದಿನಕ್ಕೆ ಕಾಲಿಡಲಿದೆ.
ಚಳಿ, ಮಳೆ, ಗಾಳಿ ಲೆಕ್ಕಿಸದೆ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಳಿಯಾಳ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಹಳಿಯಾಳ, ಕಲಘಟಗಿ, ಅಳ್ನಾವರ, ಧಾರವಾಡ, ಮುಂಡಗೋಡ ಇತರ ಭಾಗದ ಕಬ್ಬು ಬೆಳೆಗಾರ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ತಹಶೀಲ್ದಾರ್ ಭೇಟಿ :- ಧರಣಿ ಸತ್ಯಾಗ್ರಹವು 23ನೇ ದಿನಕ್ಕೆ ಕಾಲಿಟ್ಟ ಮಂಗಳವಾರದಂದು ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರು ಪ್ರತಿಭಟನಾ ನೀರತ ರೈತರನ್ನು ಭೇಟಿಯಾಗಿ ಧರಣಿ ಸತ್ಯಾಗ್ರಹ ಅಂತ್ಯಗೊಳಿಸುವಂತೆ ಮನವಿ ಮಾಡಿದರು. ಎಫ್‍ಆರ್‍ಪಿ ಪ್ರಕಾರ ರೈತರಿಗೆ ಹಣ ನೀಡಲಾಗಿದೆ ಎಂದು ಹೇಳಿದ ತಹಶೀಲ್ದಾರ್ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾವು ರೈತರನ್ನು ಭೇಟಿಯಾಗುತ್ತಿರುವುದಾಗಿ ತಿಳಿಸಿದ ಅವರು ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಕಬ್ಬಿನ ಬಾಕಿ ಬಿಲ್ 305ರೂ. ನೀಡುತ್ತೇವೆಂದು ಕರಪತ್ರಗಳನ್ನು ಹಂಚಿದ ಕಾರ್ಖಾನೆಯವರು ಈ ಸಾಲಿಗೆ ನುರಿಸಲು ರೈತರಿಂದ ಕಬ್ಬು ಪಡೆದು ಈಗ ಬಾಕಿ ಹಣ ನೀಡುವುದಿಲ್ಲ ಎಂದು ಹೇಳುವ ಮೂಲಕ ರೈತರಿಗೆ ಬಹಿರಂಗ ಮೋಸ ಮಾಡಿದ್ದಾರೆ. ಈ ಬಗ್ಗೆ ಕಂಪೆನಿಯು ರೈತರಿಗೆ ಮೋಸ ಮಾಡಿರುವ ಕುರಿತು ಕ್ರಿಮಿನಲ್ ಮೊಕದ್ದಮೇ ಹೂಡುವುದಾಗಿ ಹೇಳಿದರು. ಅಲ್ಲದೇ ಎಫ್‍ಆರ್‍ಪಿ ಪ್ರಕಾರ ರೈತರಿಗೆ ಬಿಲ್ ಸಂದಾಯವಾಗಿಲ್ಲ ಎಂದು ಆರೋಪಿಸಿದರು.
ಕಬ್ಬು ಬೆಳೆಗಾರ ಸಂಘದ ರಾಜ್ಯ ಉಪಾಧ್ಯಕ್ಷ ಎಮ್‍ವಿ ಘಾಡಿ ಮಾತನಾಡಿ ಈಗಾಗಲೇ 2016-17ನೇ ಸಾಲಿನ 305ರೂ. ಬಾಕಿ ನೀಡದೆ ರೈತರಿಗೆ ಕಾರ್ಖಾನೆ ಮಾಡಿದ ಮೊಸದ ಬಗ್ಗೆ ಸಕ್ಕರೆ ಸಚಿವ ಕೆಜೆ ಜಾರ್ಜ ಹಾಗೂ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದೆ. ಅಲ್ಲದೇ ಅವರು ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ ಆದರೇ ಈವರೆಗೆ ಯಾವುದೇ ಫಲಶ್ರುತಿ ಕಂಡು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ರೈತರ ಬೇಡಿಕೆ ಈಡೇರದೆ ಇದ್ದರೇ ಬೆಂಗಳೂರಿನ ಸಿಎಂ ಕಚೇರಿ ಹಾಗೂ ಹಳಿಯಾಳದಲ್ಲಿ 2 ಕಡೆಗಳಲ್ಲಿ ಸಾವಿರಾರು ರೈತರಿಂದ ಏಕಕಾಲದಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕುಮಾರ ಬೋಬಾಟಿ, ಅಶೋಕ ಮೇಟಿ, ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಇದ್ದರು.

kabu belegar raitrara dharani 24th day, Tahsildar visited

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Trending Tagged With: ಕಬ್ಬಿನ ಬಾಕಿ ಬಿಲ್, ಕಬ್ಬು ಬೆಳೆಗಾರರು ಅಗಸ್ಟ, ಕಾಜಗಾರ ಕಬ್ಬಿನ ಬಾಕಿ, ಗಾಳಿ ಲೆಕ್ಕಿಸದೆ, ಚಳಿ, ತಮ್ಮ ನ್ಯಾಯಯುತ ಬೇಡಿಕೆ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ ನೆರೆ ಸಂತ್ರಸ್ಥರ ಪರಿಹಾರ ನಿಧಿ, ಧರಣಿ ಹಿಂಪಡೆಯುವಂತೆ ಮನವಿ, ಪ್ರತಿ ಟನ್‍ಗೆ 305ರೂ, ಫಲಶ್ರುತಿ, ಮಳೆ, ರೈತರಿಗೆ ಬಹಿರಂಗ ಮೋಸ, ಸತ್ಯಾಗ್ರಹ ಅಂತ್ಯಗೊಳಿಸುವಂತೆ ಮನವಿ, ಹಳಿಯಾಳದಲ್ಲಿ ರೈತರ ಧರಣಿ ಸತ್ಯಾಗ್ರಹ 24 ನೇ ದಿನಕ್ಕೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...