ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಗುಪ್ತವಾರ್ತೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ರಾಘವೇಂದ್ರ ನಾಯ್ಕ ಸಿದ್ದಾಪುರ ಠಾಣಿಗೆ ವರ್ಗಾವಣೆಯ ಪ್ರಯುಕ್ತ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಅಧಿಕಾರಿಗಳು ಸಿಬ್ಬಂದಿಗಳಿಂದ ಬಿಳ್ಕೋಡುಗೆ.
ಮೂಲರ್ತ ಗೋಕರ್ಣ ತಾಲೂಕಿನ ಗಂಗಾವಳಿಯವರಾದ ರಾಘವೇಂದ್ರ ನಾಯ್ಕ 2007ರಲ್ಲಿ ಪೋಲಿಸ್ ಅಧಿಕಾರಿಯಾಗಿ ನೇಮಕವಾದರು ಆರಂಭದಲ್ಲಿ ಕಾರವಾರ ನಗರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಹೊನ್ನಾವರ ಠಾಣಿಗೆ ವರ್ಗಾವಣೆಯಾದರು. ಶಿಸ್ತು, ಪ್ರಾಮಾಣಿಕತೆ ಹೆಸರುವಾಸಿಯಾಗಿದ್ದ ರಾಘವೇಂದ್ರ ನಾಯ್ಕ ಸಿದ್ದಾಪುರ ಠಾಣಿಗೆ ವರ್ಗಾವಣೆಯಾಗಿದ್ದರು. ಆ ಪ್ರಯುಕ್ತ ಬುದವಾರ ರಾತ್ರಿ ಠಾಣಿಯಲ್ಲಿ ಸನ್ಮಾನ ನಡೆಸಿ ಆತ್ಮೀಯವಾಗಿ ಬಿಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಸಿ.ಪಿ.ಐ ಚೆಲವರಾಜು, ಪಿ.ಎಸ್.ಐ ಸಂತೋಷ ಕಾಯ್ಕಿಣಿ ಪಿ.ಎಸ್.ಐ ಸಾವಿತ್ರಿ ನಾಯ್ಕ, ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment