ಹಳಿಯಾಳ:- ದಿ.31 ರಂದು ನಡೆಯಲಿರುವ ಪುರಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರವು ಬಿದ್ದಿದೆ. 23 ವಾರ್ಡಗಳನ್ನು ಹೊಂದಿರುವ ಹಳಿಯಾಳ ಪುರಸಭೆ 23 ಮತಗಟ್ಟೆಗಳನ್ನು ಹೊಂದಿದ್ದು 2 ಅತಿಸೂಕ್ಷ್ಮ ಹಾಗೂ 11 ಸೂಕ್ಷ್ಮ ಮತಗಟ್ಟೆಗಳನ್ನು ಹೊಂದಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
23 ವಾರ್ಡಗಳನ್ನು ಹೊಂದಿರುವ ಹಳಿಯಾಳ ಪುರಸಭೆ 9096 ಪುರುಷ, 9023 ಮಹಿಳಾ ಹೀಗೆ ಒಟ್ಟೂ 18,199 ಮತದಾರರನ್ನೊಳಗೊಂಡಿದೆ.
ವಾರ್ಡ ನಂ-2 ಗುತ್ತಿಗೇರಿಗಲ್ಲಿ ಹಾಗೂ ವಾರ್ಡ-ನಂ 13 –ಜವಾಹರಗಲ್ಲಿ ಅತಿಸೂಕ್ಷ್ಮ ಮತಗಟ್ಟೆಗಳಾಗಿವೆ. ಇನ್ನೂ ವಾರ್ಡ ನಂ1, 5, 10,12, 14,15, 16,19, 20,21 ಹಾಗೂ 23 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಪ್ರತಿಯೊಂದು ಮತಗಟ್ಟೆಗೆ 1ಅಧ್ಯಕ್ಷಾಧಿಕಾರಿ(ಪಿಆರ್ಓ), 1 ಸಹಾಯಕ ಅಧ್ಯಕ್ಷಾಧಿಕಾರಿ(ಎಪಿಆರ್ಓ), ಇಬ್ಬರು ಮತಗಟ್ಟೆ ಅಧಿಕಾರಿಗಳು ಹಾಗೂ 1-ಡಿ ದರ್ಜೆ ನೌಕರ ಹೀಗೆ 5 ಜನ ಕಾರ್ಯನಿರ್ವಹಿಸಲಿದ್ದು 23 ಮತಗಟ್ಟೆಗಳಿಗೆ 115 ಸಿಬ್ಬಂದಿಗಳನ್ನು ಚುನಾವಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಹಳಿಯಾಳ ಪಟ್ಟಣದ ಶಿವಾಜಿ ವಿದ್ಯಾಲಯದಲ್ಲಿ ಇವಿಎಮ್ ಮತಯಂತ್ರಗಳನ್ನು ಬೀಗಿ ಭದ್ರತೆಯಲ್ಲಿ ಸ್ಟ್ರಾಂಗ್ರೂಂನಲ್ಲಿ ಇರಿಸಲಾಗಿದೆ.
Leave a Comment