ಮಾರುತಿ ವಸತಿ ವಿದ್ಯಾಲಯ ಬಂಗಾರಮಕ್ಕಿ ಶಾಲೆಯಲ್ಲಿ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿಯನ್ನು ನಡೆಸಲಾಯಿತು. ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ದಿವ್ಯಸಾನಿಧ್ಯದಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಶ್ರೀ ಮಾರುತಿ ಗುರೂಜಿಯವರು ಮಾತನಾಡಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಇಂತಹ ಕಾರ್ಯಕ್ರಮಗಳು ವೇದಿಕೆಯನ್ನು ಒದಗಿಸಿಕೊಡುತ್ತವೆ. ಮಕ್ಕಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಲು ಸಹಾಯಕಾರಿಯಾಗುತ್ತದೆ. ನಮ್ಮ ಈ ಸುಂದರವಾದ ಪರಿಸರವಿರುವ ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ತುಂಬಾ ಸಂತಸ ತಂದಿದೆ. ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಹಾರೈಸಿದರು.
ಸಭೆಯನ್ನುದ್ದೇಶಿಸಿ ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಅನ್ನಪೂರ್ಣ ಶಾಸ್ತ್ರಿ ರವರು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಸ್ಪರ್ಧೇಗಳಲ್ಲಿ ಭಾಗವಹಿಸುವ ಮನೋಭಾವ ಬೆಳೆಯಬೇಕು. ಮಕ್ಕಳ ಇಂತಹ ಪ್ರತಿಭಾ ಕಾರಂಜಿಯನ್ನು ನೋಡುವುದೇ ಒಂದು ರೀತಿಯ ಹಬ್ಬ. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹಜ. ಅದು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಆದ್ದರಿಂದ ಸೋಲನ್ನು ಸಹ ಮುಂದಿನ ಗೆಲುವಿನ ಮೆಟ್ಟಿಲು ಎಂದು ಭಾವಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನು ಹೇಳಿದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರತ್ನಾಕರ ದೇಶಭಂಡಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ ಬಂಗಾರಮಕ್ಕಿ ಶಾಲೆಯಲ್ಲಿ ನಡೆಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ಅನಿತಾ ನಾಯ್ಕ ಶ್ರಿ ಮಾರುತಿ ವಸತಿ ವಿದ್ಯಾಲಯದ ಆಡಳಿತ ನಿರ್ದೇಶಕರಾದ ಶ್ರೀ ಜಿ.ಟಿ. ಹೆಗಡೆ ಹಾಗೂ ಪ್ರಾಂಶುಪಾಲರಾದ ಶ್ರೀ ಶ್ರೀನಿವಾಸ ಬಿ. ಕೆ., ಶ್ರೀ ರತ್ನಾಕರ ದೇಶಭಂಡಾರಿ (ಸಿ.ಆರ್.ಪಿ.) ಕೃಷ್ಣ ಮರಾಠಿ ಹಾಡಗೇರಿ, ಮತ್ತಿತರರು ಉಪಸ್ಥಿತರಿದ್ದರು.
ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಒಟ್ಟೂ 15 ಶಾಲೆಗಳು ಭಾಗವಹಿಸಿದ್ದವು. ಸಭಾ ಕಾರ್ಯಕ್ರಮದ ನಂತರ ಆಯಾ ವೈಯಕ್ತಿಕ ವಿಭಾಗದ ಸ್ಪರ್ಧೆಗಳನ್ನು ಶ್ರೀ ಮಾರುತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ನಡೆಸಲಾಯಿತು. ಮತ್ತು ಛದ್ಮವೇಷ ಜಾನಪದ, ನೃತ್ಯ, ಕೋಲಾಟ ಸ್ಪರ್ಧೇಗಳನ್ನು ಸಭಾ ವೇದಿಕೆಯಲ್ಲಿ ನಡೆಸಲಾಯಿತು.
Leave a Comment