ಹಳಿಯಾಳ:- ಪುರಸಭೆ ಚುನಾವಣೆಯಲ್ಲಿ ಪರಾಜಿತಗೊಂಡಿರುವ ಬಿಜೆಪಿ ಅಭ್ಯರ್ಥಿಗಳ ಮನೆಗೆ ತೇರಳಿ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು.
ಜಿಲ್ಲಾ ಯುವ ಮುಖಂಡ ಅನಿಲ್ ಮುತ್ನಾಳ್, ಪುರಸಭೆ ನೂತನ ಸದಸ್ಯ ಸಂತೋಷ ಘಟಕಾಂಬಳೆ ಇತರ ಪ್ರಮುಖ ಮುಖಂಡರೊಂದಿಗೆ ಮಂಗಳವಾರ ಪಟ್ಟಣದಲ್ಲಿ ಸೋತ ಅಭ್ಯರ್ಥಿಗಳ ಮನೆಗಳಿಗೆ ತೆರಳಿ ಅವರೊಂದಿಗೆ ಚರ್ಚಿಸಿದ ಹೆಗಡೆ ಸೋತ ಕಾರಣಕ್ಕೆ ಧೃತಿ ಗೆಡದೆ, ವಾರ್ಡಗಳಲ್ಲಿ ಅಭಿವೃದ್ದಿಪರ ಕಾರ್ಯಗಳಲ್ಲಿ ತೊಡಗುವಂತೆ ಉತ್ಸಾಹ ತುಂಬಿದರು.
ಬಿಜೆಪಿ ಪಕ್ಷ ಶೂನ್ಯದಿಂದ 7 ಸ್ಥಾನಗಳಿಸಿದ್ದು ಪುರಸಭೆಯಲ್ಲಿ ಪ್ರಭಲ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಇದರ ಸದುಪಯೋಗ ಪಡೆದು ಸಾರ್ವಜನೀಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಕಾರ್ಯಪ್ರವೃತ್ತರಾಗುವಂತೆ ಕರೆ ನೀಡಿದ ಸುನೀಲ್ ಹೆಗಡೆ ಪಟ್ಟಣದಲ್ಲಿ ನಡೆಯುತ್ತಿರುವ ಕೆಲವು ಕಾನೂನು ಬಾಹಿರ ಚಟುವಟಿಕೆಗಳ ವಿರುದ್ದ ಬಿಜೆಪಿ ಬೃಹತ್ ಹೋರಾಟ ನಡೆಸಲು ಸನ್ನದ್ದವಾಗಿದೆ ಎಂದರು.
Leave a Comment