ಹಳಿಯಾಳ:- ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಳಿಯಾಳದ ಹಿರಿಯ ನಾಗರಿಕರ ಸಂಘದವರು ವಿವಿಧ ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಂಡು ತಮ್ಮ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಿದರು.
ಪಟ್ಟಣದ ಗ್ರಾಮದೇವಿ ಮೈದಾನದಲ್ಲಿ ತಾಲೂಕಾ ಮಟ್ಟದಲ್ಲಿ ನಡೆದ ಸ್ಪರ್ಧೆಗಳಲ್ಲಿ ಪುರುಷರು/ಮಹಿಳೆಯರು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ತೊರ್ಪಡಿಸಿದರು.
ಪುರುಷರಿಗಾಗಿ 100, 75 ಮೀ.ಓಟ, 3ಕೆಜಿ ಗುಂಡು ಎಸೆತ, 200ಮೀ ನಡಿಗೆ, ಕ್ರೀಕೆಟ್ ಚೆಂಡು ಎಸೆತ, ಏಕಪಾತ್ರಾಭಿನಯ, ಜಾನಪದ ಗೀತೆ ಸ್ಪರ್ದೆಗಳು ನಡೆದು ಮೈಕಲ್ ಡಿಸೋಜಾ, ಓಮನ್ನ ಶಿರೋಡಕರ, ದಾಮೋದರ ಖಾಂದೋಳಕರ, ಅರವಿಂದ ಪಾಟನಕರ, ಡಿ. ಕೆ. ನಾಯಕ, ಡಿ. ಎಮ್. ಸಾವಂತ, ಎಮ್.ಡಿ. ಬಿರ್ಜೆ, ಶಿವಾನಂದ ಶೆಟ್ಟಿ, ಎಮ್. ಆರ್. ದೇಶಪಾಂಡೆ, ಜಡಿ ಗಂಗಾಧರ, ಜಂಪನ್ ಹೈಬತ್ತಿ, ಕಡೆಮನಿ, ಸವಟಗಿ ಅವರು ವಿವಿಧ ವಿಭಾಗಗಳಲ್ಲಿ ವಿಜೇತರಾಗಿದ್ದಾರೆ.
ಮಹಿಳೆಯರಿಗಾಗಿ 400, 200 ಮೀ. ನಡಿಗೆ, ಕ್ರೀಕೆಟ್ ಚೆಂಡು ಎಸೆತ, ಏಕಪಾತ್ರಾಭಿನಯ, ಜಾನಪದ ಗೀತೆ ನಡೆದ ಸ್ಪರ್ದೆಗಳಲ್ಲಿ ಸುಮಿತ್ರಾ ಓಶಿಮಠ, ವಿದ್ಯಾ ಕಾನಿಟಕರ, ಸುರೇಖಾ ಬೆಂಡೆ, ಮಂಜುಳಾ ಪಂಡಿತ ವಿಜೇತರಾಗಿ ಬಹುಮಾನಗಳನ್ನು ಪಡೆದರು.
Leave a Comment