ಹೊನ್ನಾವರ: À ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್ನ ಆಶ್ರಯದಲ್ಲಿInstitute of Finance, Banking and Insurance (IFBI) Mysore ಇವರು ICICIಬ್ಯಾಂಕಿನಲ್ಲಿ ಆಫೀಸರ್ ಹುದ್ದೆಗಳಿಗಾಗಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಕ್ಯಾಂಪಸ್ ಸಂದರ್ಶನ ನಡೆಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 85 ಬಿ.ಕಾಂ., ಬಿ.ಬಿ.ಎ. ಹಾಗೂ ಎಂ.ಕಾಂ. ಪದವಿಧರರು ಹಾಜರಾಗಿ, ಸಂದರ್ಶನ ಎದುರಿಸಿ, ಅವರಲ್ಲಿ 38 ಅಭ್ಯರ್ಥಿಗಳು ಹುದ್ದೆಯ ತರಬೇತಿಗಾಗಿ ಆಯ್ಕೆಯಾಗಿರುತ್ತಾರೆ.
IಈಃI ಮೈಸೂರು ಇದರ ಅಧಿಕಾರಿ ಶ್ರೀ ಆದರ್ಶ ಕೆ. ಎಚ್.ರವರು ಆಯ್ಕೆ ಪ್ರಕ್ರೀಯೆಯನ್ನು ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಸಿದರು. ಆರಂಭದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಎಂ.ಪಿ.ಇ. ಸೊಸೈಟಿಯ ಕಾರ್ಯದರ್ಶಿ . ಎಸ್. ಎಂ. ಭಟ್ಟ ಕಾರ್ಯಕ್ರಮ ಉದ್ಘಾಟಿಸಿ ಪದವಿಧರರಿಗೆ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಶುಭ ಕೋರಿದರು. ಪ್ಲೇಸ್ಮೆಂಟ್ ಆಫೀಸರ್ ಡಾ. ಡಿ. ಎಲ್. ಹೆಬ್ಬಾರ ಪ್ರಾಸ್ಥಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. ಡಾ. ಶಿವರಾಮ ಶಾಸ್ತ್ರಿಯವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಆಯ್ಕೆಯಾದ 38 ವಿದ್ಯಾರ್ಥಿಗಳು ಮೈಸೂರಿನಲ್ಲಿ ತರಬೇತಿ ಪಡೆದುಕೊಳ್ಳಲು ಸೂಚಿಸಿದೆ.
Leave a Comment