ಹೊನ್ನಾವರ: ಯುವತಿಯೊಬ್ಬಳು ರೈಲ್ವೆ ಹಳಿಯ ಮೇಲೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಮಂಕಿಯಲ್ಲಿ ನಡೆದಿದೆ.
ಮಂಕಿ-ಮುರ್ಡೇಶ್ವರದ ನಡುವಿನ ರೈಲ್ವೆ ಹಳಿಯ ಮೇಲೆ ಮಂಕಿಯ ವಡಿಗೇರಿಯ ಯುವತಿ ಮಾಲಿನಿ ಮಾದೇವ ಗೌಡ (23) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳು ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಕಳೆದ ಎರಡು ವಾರದ ಹಿಂದೆ ಮಂಗಳೂರಿನಿಂದ ಮಂಕಿಯ ವಡಗೇರಿಯ ನಿವಾಸಕ್ಕೆ ಆಗಮಿಸಿದ್ದಳು ಎನ್ನಲಾಗಿದೆ. ಸಾಯಂಕಾಲ 4 ಗಂಟೆಯ ವೇಳೆಗೆ ಎರ್ನಾಕುಲಂ-ಪುಣೆ ಎಕ್ಸ್ಪ್ರೆಸ್ ರೈಲಿಗೆ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಮೃತ ಯುವತಿಯ ರೈಲಿಗೆ ಸಿಲುಕಿ ಕೈ ತುಂಡರಿಸಿ ರೈಲ್ವೆ ಹಳಿ ಪಕ್ಕಕ್ಕೆ ಬಿದ್ದಿದ್ದು ದೇಹ ಚಿದ್ರ ಚಿದ್ರವಾಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮಂಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment