ಹೊನ್ನಾವರ : ಪಟ್ಟಣದ ರಥಬೀದಿಯ ವೆಂಕಟರಮಣ ದೇವಸ್ಥಾನದಲ್ಲಿ ಇತ್ತೀಚೆಗೆ ಶ್ರೀರಾಮ ಭಜನಾ ಮಂಡಳಿಯವರಿಂದ `ವಾರ್ಷಿಕ ಭಜನಾ ಪೂಜೆ ಸಮರ್ಪಣೆ’ ನಡೆಯಿತು.
ಕಲಾವಿದ ನಿತ್ಯಾನಂದ ಪಾಲೇಕರ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಂಜುನಾಥ ಮೇಸ್ತ ಹಾಗೂ ವಿವೇಕ ನಾಯ್ಕ ತಬಲಾ-ಹಾರ್ಮೊನಿಯಂ ಸಾಥ್ ನೀಡಿದರು. ಅರುಣ ಮೇಸ್ತ, ಸೂರ್ಯಕಾಂತ ಮೇಸ್ತ, ಕಾರ್ತಿಕ್ ಸ್ವಸ್ತಿಕ್ ಪಾಲೇಕರ್, ಗುರು ನಾಯ್ಕ, ಗಣೇಶ ಮೇಸ್ತ, ನಾಗರಾಜ ಮೇಸ್ತ, ಈಶ್ವರ ಮೇಸ್ತ, ಮೊದಲಾದವರು ಸಹಕರಿಸಿದರು.
ಪ್ರಮುಖರಾದ ಶಿವರಾಜ್ ಮೇಸ್ತ, ವಿಠ್ಠಲ್ ಮೇಸ್ತ, ಸುರೇಶ ಮೇಸ್ತ, ಸಮಾಜ ಬಾಂಧವರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
ಕೊನೆಯಲ್ಲಿ ಪುರೋಹಿತ ರಾಮ ಭಟ್ಟರ ನೇತೃತ್ವದಲ್ಲಿ ವಿಜೃಂಭಣೆಯಿಂದ ಶ್ರೀ ದೇವರ ಪೂಜೆ ನಡೆಯಿತು.
Leave a Comment