ಹೊನ್ನಾವರ ತಾಲೂಕ ಆಡಳಿತದ ಹಾಗೂ ವಿಶ್ವಕರ್ಮ ಅಭಿವೃದ್ದಿ ಸಂಘದ ವತಿಯಿಂದ ನಡೆಯಿತು ವಿಶ್ವದ ಸೃಷ್ಟಿಕರ್ತನಾದ ವಿಶ್ವಕರ್ಮನ ಅದ್ದೂರಿ ಜನ್ಮದಿನಾಚರಣೆ
ಹೊನ್ನಾವರ ತಹಶೀಲ್ದಾರ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುರ್ಡೇಶ್ವರ ವಿಶ್ವಕರ್ಮ ದೇವಾಲಯದ ಪ್ರದಾನ ಅರ್ಚಕರಾದ ವೇದಮೂರ್ತಿ ಗಂಗಾಧರ ಆಚಾರ್ಯ ಇವರು ಧಾರ್ಮಿಕ ವಿಧಿವಿಧಾನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾಲೂಕ ವಿಶ್ವಕರ್ಮ ಸಮುದಾಯದ ಉಪಾಧ್ಯಕ್ಷ ಕೃಷ್ಣ ಆಚಾರ್ಯ ಮಾತನಾಡಿ ಜಗತ್ತನ್ನು ಸೃಷ್ಟಿ ಮಾಡಿದವರನ್ನು ಸ್ಮರಿಸಬೇಕಾದುದು ಎಲ್ಲರ ಜವಾಬ್ದಾರಿಯಾಗಿದೆ. ಸರ್ಕಾರ ಕಳೆದ 3 ವರ್ಷದಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸುತ್ತಾ ಬಂದಿದೆ. ನಮ್ಮ ಭಾಗದಲ್ಲಿ ಹೇಗೆ ಪ್ರತಿ ಧಾರ್ಮಿಕ ಕಾರ್ಯಕ್ರಮದ ಪ್ರಾರಂಭದಲ್ಲಿ ಗಣಪತಿ ಪೂಜೆ ಮಾಡುವಂತೆ ಉತ್ತರ ಭಾರತದ ಭಾಗದಲ್ಲಿ ವಿಶ್ವಕರ್ಮನ ಸ್ಮರಣೆ ಮಾಡುವುದನ್ನು ಗಮನಿಸಿದರೆ ನಮ್ಮ ಸಮುದಾಯದ ಪ್ರಾಮುಖ್ಯತೆಯನ್ನು ಇಲ್ಲಿ ಗಮನಹರಿಸಬಹುದಾಗಿದೆ.
ಸಮುದಾಯದ ತಾಲೂಕ ಅಧ್ಯಕ್ಷರಾದ ಎಂ. ಎಸ್ ಆಚಾರ್ಯ ಮಾತನಾಡಿ ಬಾದಾಮಿ, ಐಹೋಳೆಯಂತಹ ಪುರಾತನ ಪ್ರಸಿದ್ದ ಶಿಲ್ಪಕಲೆಯನ್ನು ನಿರ್ಮಾಣ ಕಾರ್ಯ ಅಂದು ಶ್ರಮವಹಿಸಿದವರು ಎಂದು ಹೇಳುತ್ತಾರೆ. ನಮ್ಮಿಂದ ನಿರ್ಮಾಣವಾದ ಪ್ರವಾಸಿ ಸ್ಥಳದಿಂದ ಇಂದು ಸರ್ಕಾರಕ್ಕೆ ಪ್ರತಿವರ್ಷವು ಆದಾಯ ಬರುತ್ತದೆ ಆದರೆ ಸಮುದಾಯದವರ ಕಷ್ಟವನ್ನು ಬಗೆಹರಿಸುವ ಚಿಂತನೆ ಸರ್ಕಾರ ಮಾಡುತ್ತಿಲ್ಲ. ಇದು ತೀರಾ ಬೇಸರದ ಸಂಗತಿಯಾಗಿದೆ. ಜಯಂತಿಯ ಆಚರಣೆಯನ್ನು ಜೊತೆ ಮುಂದಿನ ದಿನದಲ್ಲಿ ಆ ಸಮುದಾಯದವರ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕ ದಂಡಾದಿಕಾರಿ ಮಂಜುಳಾ ಭಜಂತ್ರಿ ಮಾತನಾಡಿ ಸರ್ಕಾರದ ಆದೇಶದ ಮೇರೆಗೆ ಧಾರ್ಮಿಕ ವಿಧಿವಿಧಾನದ ಮೂಲಕ ಶೃದ್ದಾಭಕ್ತಿಯಿಂದ ಅಚರಿಸಲಾಗಿದೆ. ವಾಸ್ತು ಪುರುಷನ ಮಗ ಎಂದು ಪುರಾಣಪ್ರಸಿದ್ದತೆ ಪಡೆದ ವಿಶ್ವಕರ್ಮನು ವಿಶ್ವದ ಸೃಷ್ಟಿಗೆ ಕಾರಣ. ಇಂದು ಆಸಮುದಾಯದವರು ತಮ್ಮ ವೃತ್ತಿಯ ಮೂಲಕ ಅಭಿವೃದ್ದಿಯಾಗುವಲ್ಲಿ ಶ್ರಮ ವಹಿಸುತ್ತಿದ್ದಾರೆ. ಅವರ ನಿಶ್ವಾರ್ಥ ಸೇವೆ ನಮ್ಮಗೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗೀರೀಶ ಪದಕಿ, ತಾಲೂಕ ಕಾರ್ಯದರ್ಶಿ ಮಾರುತಿ ಆಚಾರಿ, ವಿವಿಧ ಇಲಾಖೆಯ ಅಧಿಕಾರಿಗಳು, ಉಪಸ್ಥಿತರಿದ್ದರು.
Leave a Comment