ಹಳಿಯಾಳ:- ಪಟ್ಟಣದ ಯಡೋಗಾ ರಸ್ತೆಯಲ್ಲಿರುವ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಶ್ರೀ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಶಿವಾಜಿ ಪುಥ್ಥಳಿಯನ್ನು ಮಂಗಳವಾರ ರಾತ್ರಿ ಪ್ರತಿಷ್ಠಾಪಿಸಲಾಗಿದೆ.
ಕಳೆದ 5-6 ತಿಂಗಳಿನಿಂದ ಮೂರ್ತಿ ಸ್ಥಾಪನೆಗೆ ಅವಕಾಶ ಕೋರಿ ಈ ಭಾಗದ ಜನ ಸಂಬಂಧಪಟ್ಟ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸಿದ್ದರು. ಅಲ್ಲದೇ ಮನವಿ ನೀಡಿದ್ದರು ಸ್ಪಂದಿಸದ ಇಲಾಖೆಗಳು ಮೂರ್ತೀ ಪ್ರತಿಷ್ಠಾಪನೆಗೆ ಅವಕಾಶ ನೀರಾಕರಿಸಿದ್ದವು ಎನ್ನಲಾಗಿದೆ. ಆದರೇ ಇದರಲ್ಲಿ ರಾಜಕೀಯ ಬೆರೆತಿದೆ ಎಂದು ಅರಿತ ಆ ಭಾಗದ ನೂರಾರು ಯುವಕರು, ಮಹಿಳೆಯರು ಮಂಗಳವಾರ ರಾತ್ರಿ ಒಮ್ಮೆಲೆ ಸಭೆ ಸೇರಿ ಸುಮಾರು 800 ಕೆಜಿ ಭಾರದ ಮೂರ್ತಿಯನ್ನು ಹೊತ್ತು ಶೀವಾಜಿ ಪಿಠದಲ್ಲಿ ಸ್ಥಾಪಿಸಿಯೇ ಬಿಟ್ಟರು.
ಮೂರ್ತಿ ಸ್ಥಾಪಿಸುವ ಸಂದರ್ಭದಲ್ಲಿ ಇದನ್ನು ತಡೆಯಲು ಮುಂದಾದ ಪೋಲಿಸರೊಂದಿಗೆ ಮಾತಿನ ಚಕಮಕಿ ನಡೆದು ನೂಕಾಟ ತಳ್ಳಾಟವು ನಡೆಯಿತು. ಇದರಿಂದ ಮಹಿಳೆಯರಿಗೆ ಗಾಯಗಳಾಗಿವೆ ಎಂದು ಜನರು ಮಾಧ್ಯಮಗಳ ಮುಂದೆ ಹೇಳಿದರು.
ಮಹಾನ್ ರಾಷ್ಟ್ರಪುರುಷ, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶೀವಾಜಿ ಮಹಾರಾಜರ ಪುಥ್ಥಳಿ ಸ್ಥಾಪನೆಯನ್ನು ನಾವು ಮಾಡಿದ್ದೇವೆ. ನಮ್ಮ ಆರಾಧ್ಯ ದೈವ ಶಿವಾಜಿ ಮಹಾರಾಜರಾಗಿದ್ದು ಪುಥ್ಥಳಿ ಪ್ರತಿಷ್ಠಾಪನೆ ಸಂಬಂಧಪಟ್ಟಂತೆ ನಮ್ಮ ವಿರುದ್ದ ಯಾವುದೇ ಪ್ರಕರಣ ದಾಖಲಾದರೂ ನಾವು ಅದನ್ನು ಎದುರಿಸಲು ಸಿದ್ದ, ಜೈಲಿಗೆ ಹೋಗಲು ಸಿದ್ದ ಎಂದು ಈ ಭಾಗದ ಜನರು ಒಕ್ಕೋರಲಿನಿಂದ ಮಾಧ್ಯಮದ ಮುಂದೆ ಹೇಳಿದರು.
ಪ್ರಕರಣ ದಾಖಲು :- ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಅವರು ಉಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಸ್ಥಳದಲ್ಲಿ ಮೂರ್ತಿ ಸ್ಥಾಪನೆಗೆ ಅವಕಾಶವಿಲ್ಲದಿದ್ದರು. ದೇಸಾಯಿಗಲ್ಲಿ, ಶೆಟ್ಟಿಗಲ್ಲಿ, ಕಿಲ್ಲಾ ಪ್ರದೇಶದ ಸುಮಾರು 300-500 ಜನ ಸಾರ್ವಜನೀಕರು ಹಾಗೂ ಮಹಿಳೆಯರು ಸರ್ಕಾರಿ ಜಾಗೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಹಳಿಯಾಳ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಇನ್ನೂ ಪೋಲಿಸ್ ಇಲಾಖೆಯವರು ಕೂಡ ಪರವಾನಿಗೆ ಇಲ್ಲದೇ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂದರ್ಭದಲ್ಲಿ ಇದನ್ನು ತಡೆಯಲು ಹೋದ ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಮಹಿಳೆಯರು ಹಾಗೂ ಸಾರ್ವಜನೀಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೋಲಿಸ್ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.
ಪ್ರಕರಣ ಪೋಲಿಸ್ ಮಹಾನಿರ್ದೇಶಕರ ವರೆಗೂ ಹೋಗಿದ್ದು ಬುಧವಾರ ಎಎಸ್ಪಿ ಬ್ಯಾಕೋಡ, ಡಿವೈಎಸ್ಪಿ ಮೋಹನದಾಸ ಹಳಿಯಾಳಕ್ಕೆ ಭೆಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ಕ್ರಮಕ್ಕೆ ಆದೇಶಿಸಿದ್ದಾರೆಂದು ಪೋಲಿಸ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ವೇಳೆ ನಡೆದ ಘಟನೆ ಹಾಗೂ ಬಳಿಕ ಬುಧವಾರ ಪ್ರಕರಣ ದಾಖಲಾಗಿರುವ ವಿಷಯ ಹಳಿಯಾಳದಲ್ಲಿ ತೀವೃ ಚರ್ಚೆಗೆ ಗ್ರಾಸವಾಗಿದ್ದು. ಮುನ್ನೆಚ್ಚರಿಕೆ ಕ್ರಮವಾಗಿ ಹಳಿಯಾಳದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ ಏರ್ಪಡಿಸಲಾಗಿದೆ.
Jai shivaji
Jai Bhavani
Ene barli vagat erali