ಹಳಿಯಾಳ:- ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದ ಪ್ರಮುಖ ವೃತ್ತದಲ್ಲಿ ರಾತ್ರೋರಾತ್ರಿ ಶ್ರೀ ಛತ್ರಪತಿ ಶೀವಾಜಿ ಮಹಾರಾಜರ ಅಶ್ವಾರೂಢ ಶಿವಾಜಿ ಪುಥ್ಥಳಿ ಸ್ಥಾಪನೆಗೆ ಸಂಬಂಧಿಸಿದಂತೆ ಬಿಜೆಪಿ ಹಳಿಯಾಳ ತಾಲೂಕಾಧ್ಯಕ್ಷರು ಹಾಗೂ ಬಿಜೆಪಿಯ ನೂತನ ಪುರಸಭಾ ಸದಸ್ಯರು ಸೇರಿದಂತೆ ಈಗಾಗಲೇ 25 ಜನರ ಮೇಲೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇನ್ನೂ ಎಷ್ಟು ಜನರ ಮೇಲೆ ಪ್ರಕರಣ ದಾಖಲಾಗಲಿದೆ ಎನ್ನುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕಿಲ್ಲಾ ಭಾಗದ 3-4 ಗಲ್ಲಿಗಳ ಜನತೆ ಕಳೆದ 5-6 ತಿಂಗಳಿನಿಂದ ಮೂರ್ತಿ ಸ್ಥಾಪನೆಗೆ ಅವಕಾಶ ಕೋರಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ನಡೆಸಿದ್ದರು. ಅಲ್ಲದೇ ಮನವಿ ನೀಡಿದ್ದರು ಸ್ಪಂದಿಸದ ಇಲಾಖೆಗಳು ಮೂರ್ತೀ ಪ್ರತಿಷ್ಠಾಪನೆಗೆ ಅವಕಾಶ ನೀರಾಕರಿಸಿದ್ದವು ಅಲ್ಲದೇ ಇದರಲ್ಲಿ ರಾಜಕೀಯ ಬೆರೆತಿದೆ ಎಂದು ಅರಿತ ಆ ಭಾಗದ ನೂರಾರು ಯುವಕರು, ಮಹಿಳೆಯರು ಮಂಗಳವಾರ ರಾತ್ರಿ ಒಮ್ಮೆಲೆ ಸಭೆ ಸೇರಿ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಿದ್ದರು.
ಆದರೇ ಪರವಾನಿಗೆ ಇಲ್ಲದೇ ಮೂರ್ತಿ ಸ್ಥಾಪನೆ ಮಾಡಲಾಗುತ್ತಿದೆ ಎಂದು ಪೋಲಿಸರು ಅದನ್ನು ತಡೆಯಲು ಮುಂದಾದಾಗ ಪೋಲಿಸರು ಹಾಗೂ ಜನರ ಮಧ್ಯೆ ನುಕಾಟ ತಳ್ಳಾಟ ನಡೆಯಿತು ಅಲ್ಲದೇ ಪೋಲಿಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಲು ಪ್ರಯತ್ನಿಸಿದರು ಫಲ ನೀಡದೆ ನೂರಾರು ಶಿವಾಜಿ ಅಭಿಮಾನಿಗಳು ಹರ್ಷೋಧ್ಘಾರಗಳ ನಡುವೆ ಮೂರ್ತಿ ಸ್ಥಾಪಿಸಿ ಜೈ ಎಂದರು. ಈ ಸಂದರ್ಭದಲ್ಲಿ ಪೋಲಿಸರು ಸೇರಿ ಮಹಿಳೆಯರು, ಯುವಕರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ ಎಂದು ಜನರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಉಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಸ್ಥಳದಲ್ಲಿ ಮೂರ್ತಿ ಸ್ಥಾಪನೆಗೆ ಅವಕಾಶವಿಲ್ಲದಿದ್ದರು. ಪರವಾನಿಗೆ ಪಡೆಯದೆ ನ್ಯಾಯಾಲಯದ ಆದೇಶ ಹಾಗೂ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಶ್ರೀನಿವಾಸ ಸಾಳುಂಕೆ, ಪವನ ಪಾಟೀಲ್, ನಾಗೇಂದ್ರ ಜಾಧವ, ನಾಗು ಕೃಷ್ಣಾ ಕಮ್ಮಾರ, ನಂದಾ ಗಾಡಿ, ಪ್ರಕಾಶ ರಾಘೋಬನವರ, ಪರಶುರಾಮ ನಾಯ್ಕೋಜಿ, ಬಾಳು ಜಾಧವ, ಸುನೀಲ್ ಮಾವಳಂಗಿ, ಕಿರಣ ಪೂಜಾರಿ, ಜ್ಞಾನೇಶ್ವರ ಕದಂ ನೇತೃತ್ವದಲ್ಲಿ ದೇಸಾಯಿಗಲ್ಲಿ,ಬಸವನಗಲ್ಲಿ ಶೆಟ್ಟಿಗಲ್ಲಿಯ ಸುಮಾರು 700-800 ಯುವಕರು ಮತ್ತು ಮಹಿಳೆಯರು ಸೇರಿ ಮೂರ್ತಿ ಪ್ರತಿಷ್ಠಾಪಿಸಿ ಕಾನೂನು ಉಲ್ಲಂಘಿಸಿದ್ದು ಅವರ ಮೇಲೆ ಕಲಂ 143,147,447 ಸಹಿತ 149 ಐಪಿಸಿ ಮತ್ತು ಕಲಂ 192(ಎ) ಲ್ಯಾಂಡ ರೆವಿನ್ಯೂ ಎಕ್ಟ್ 1964, ಕಲಂ.5 ಕರ್ನಾಟಕ ಲ್ಯಾಂಡ್ ಗ್ರಾಬಿಂಗ್ ಪ್ರಾಹಿಬ್ಯೂಶನ್ ಎಕ್ಟ್ 2011 ಪ್ರಕಾರ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಇನ್ನೂ ಹಳಿಯಾಳ ಸಿಪಿಐ ಸುಂದ್ರೇಶ ಹೊಳೆಣ್ಣವರ ಹಳಿಯಾಳ ಪೋಲಿಸ್ ಠಾಣೆಗೆ ದೂರು ನೀಡಿದ್ದು ಪರವಾನಿಗೆ ಇಲ್ಲದೇ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದವರನ್ನು ತಡೆಯಲು ಹೊದಾಗ ಪೋಲಿಸರ ಮೇಲೆ ಏರಗಿದ ಯುವಕರು, ಮಹಿಳೆಯರು ನೂಕಾಟ-ತಳ್ಳಾಟ ನಡೆಸಿದ್ದರಿಂದ ಪಿಎಸ್ಐ ಆನಂದಮೂರ್ತಿ, ತಮಗೆ ಹಾಗೂ ಇತರ 3 ಪೋಲಿಸರಿಗೆ ಗಾಯಗಳಾಗಿದ್ದು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಶ್ರೀನಿವಾಸ ಸಾಳುಂಕೆ, ಪವನ ಪಾಟೀಲ್, ನಾಗೇಂದ್ರ ಜಾಧವ, ನಾಗು ಕೃಷ್ಣಾ ಕಮ್ಮಾರ, ನಂದಾ ಗಾಡಿ, ಪ್ರಕಾಶ ರಾಘೋಬನವರ, ಪರಶುರಾಮ ನಾಯ್ಕೋಜಿ, ಬಾಳು ಜಾಧವ, ಸುನೀಲ್ ಮಾವಳಂಗಿ, ಕಿರಣ ಪೂಜಾರಿ, ಜ್ಞಾನೇಶ್ವರ ಕದಂ, ಶಿವಾಜಿ ಎನ್ ಜಾಧವ, ಪವನ ಪಿ ಶೆಟ್ಟು, ವಿಶ್ವನಾಥ ಪೂಜಾರಿ, ಮಹೇಶ ಪೂಜಾಳಿ, ರಾಘೋಬಾ, ಮಹಿಳೆಯರಾದ ಶಕುಂತಲಾ ಮಾರುತಿ ಜಾಧವ, ಮಂಗಲಾ ದತ್ತಾ ಪಾಟೀಲ್, ರೇಣುಕಾ ಹಣಗಿ, ಮಂಗಳಾ ಮಿರಾಲಾಲ್ ಚಿಕ್ಕೊಡಿ, ರೇಣುಕಾ ಗುರುನಾಥ ಜಾಧವ, ಸರಸ್ವತಿ ಮಲ್ಲಪ್ಪ ಹಾಗೂ ಬಿಜೆಪಿ ಪಕ್ಷದ ಹಳಿಯಾಳ ತಾಲುಕಾಧ್ಯಕ್ಷ ಶಿವಾಜಿ ನರಸಾನಿ, ನೂತನ ಪುರಸಭಾ ಸದಸ್ಯ ಸಂತೋಷ ಘಟಕಾಂಬಳೆ ಹಾಗೂ ಬಿಜೆಪಿ ಮುಖಂಡ ವಿಜಯ ಬೋಬಾಟಿ ಮೇಲೆ ಪ್ರಕರಣ ದಾಖಲಾಗಿದ್ದು ಇನ್ನೂ 200ರಿಂದ 250 ಜನರು ಎಂದು ದೂರಿನಲ್ಲಿ ದಾಖಲಾಗಿದೆ.
ಘಟನೆ ನಡೆದಾಗ ಸ್ಥಳದಲ್ಲಿ ಇರದ ಕೆಲವರ ಹೆಸರನ್ನು ಪ್ರಕರಣದಲ್ಲಿ ಸೇರಿಸಲಾಗಿರುವುದು ಇದು ರಾಜಕೀಯ ಪ್ರೇರಿತವಾಗಿದೆ ಎನ್ನುವುದು ಪಟ್ಟಣದ ಜನತೆಯ ಮಾತಾಗಿದ್ದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷ ಹಾಗೂ ಹಲವು ಹಿಂದೂ ಸಂಘಟನೆಗಳು ಇನ್ನೇರಡು ದಿನಗಳಲ್ಲಿ ಪ್ರತಿಭಟನೆ ನಡೆಸುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿವೆ.
Kelavu rajakiya mukandaru sarkari jagavannnu atikram madiddare modalu avara mele kram kaigollabeku . Adikarigalu rajakiya vyaktigala mele krama kaigollodilla . Edaralli rajakiya beretide.