ಹಳಿಯಾಳ:- ತಾಲೂಕಿನ ಗುಂಡೋಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಶಾಲೆಯ ಮುಖ್ಯಾದ್ಯಾಪಕ ವಾಯ್.ಬಿ.ಮಾದಾರ ತಿಳಿಸಿದ್ದಾರೆ.
ಇತ್ತೀಚೆಗೆ ಶಿರಸಿಯಲ್ಲಿ ನಡೆದ ಜಿಲ್ಲಾಮಟ್ಟದ ಕಬ್ಬಡ್ಡಿ ಸ್ಪರ್ದೆಯಲ್ಲಿ ಭಾಗವಹಿಸಿದ ಶಾಲೆಯ ತಂಡದಲ್ಲಿ ವಿದ್ಯಾರ್ಥಿನೀಯರಾದ ಫಾತಿಮಾ ಕಪಟಗೇರಿ,ಹೃತಿಕಾ ಕಂಬಾರ, ರಾಧಾ ಘಾಡೇಕರ,ಅಶ್ವೀನಿ ರಾಚೋಟಕರ, ದಿವ್ಯಾ ಮೋರೆ. ದೀಪಾ ಗೌಡಾ, ಸಾವಿತ್ರಿ ದಲಾಲ ಅವರುಗಳು ಶಿರಸಿ ತಂಡದ ವಿರುದ್ದ ಜಯಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾಲೆಯ ದೈಹಿಕ ಶಿಕ್ಷಕರಾದ ವಿ.ಪಿ. ಭಟ್ ತರಬೇತಿ ನೀಡಿದ್ದು ವಿದ್ಯಾರ್ಥಿನಿಯರ ಸಾಧನೆಗೆ ಅಭಿನಂದನೆ ಸಲ್ಲಿಸಲಾಗಿದೆ.
Leave a Comment