• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚತುಷ್ಪದ ಹೆದ್ದಾರಿಗೆ ಮೇಲ್‍ಸೇತುವೆ ನಿರ್ಮಿಸಲು ಒತ್ತಾಯಿಸಿ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮನವಿ

September 29, 2018 by Gaju Gokarna Leave a Comment

watermarked NEWS 1

ಹೊನ್ನಾವರ : ಪಟ್ಟಣದಲ್ಲಿ ಹಾದು ಹೋಗುವ ಚತುಷ್ಪದ ಹೆದ್ದಾರಿಗೆ ಮೇಲ್‍ಸೇತುವೆ ನಿರ್ಮಿಸಲು ಒತ್ತಾಯಿಸಿ ಜಾಗೃತ ಹೊನ್ನಾವರ ಸಂಘಟನೆಯೊಂದಿಗೆ ತಾಲೂಕಿನ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮನವಿ ನೀಡಿತು.
ಮನವಿ ಸ್ವೀಕರಿಸಿದ ತಹಶೀಲ್ದಾರ ವಿ.ಆರ್. ಗೌಡ ಸರ್ಕಾರಕ್ಕೆ ಮನವಿ ರವಾನಿಸಿ ಕೆಲವೇ ದಿನದಲ್ಲಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಗುತ್ತಿಗೆ ಕಂಪನಿಯ ಉಪಸ್ಥಿತಿಯಲ್ಲಿ ಸಾರ್ವಜನಿಕ ಸಂಘಟನೆಯ ಪದಾಧಿಕಾರಿಗಳ ಜೊತೆ ಸಭೆ ನಡೆಸುವದಾಗಿ ಭರವಸೆ ನೀಡಿದರು.
ಜಾಗೃತ ಹೊನ್ನಾವರ ಸಂಘಟನೆಯ ಮುಖ್ಯಸ್ಥ ಎಮ್.ಎನ್. ಸುಬ್ರಹ್ಮಣ್ಯ ಮಾತನಾಡಿ ಪಟ್ಟಣದಲ್ಲಿ ಹೆದ್ದಾರಿ ಕಾಮಗಾರಿ ಸ್ಪಷ್ಟ ಚಿತ್ರಣವನ್ನು ಗುತ್ತಿಗೆ ಕಂಪನಿ ಜನರಿಗೆ ನೀಡುತ್ತಿಲ್ಲ. ಪಟ್ಟಣದಲ್ಲಿ ರಸ್ತೆ ಅಗಲ ಎಷ್ಟು ಎನ್ನುವುದನ್ನು ಹೇಳುತ್ತಿಲ್ಲ. ಜನ ಮತ್ತು ವಾಹನ ಸಂಚಾರದ ಒತ್ತಡವನ್ನು ಆದರಿಸಿ ಮೇಲ್‍ಸೇತುವೆ ನಿರ್ಮಿಸಲು ಮಣ ್ಣನ ಪರೀಕ್ಷೆ ಕೂಡ ಈ ಹಿಂದೆ ಮಾಡಿ ಮೇಲ್‍ಸೇತುವೆ ನಿರ್ಮಿಸಲು ಯೋಗ್ಯ ಎಂದು ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಇತ್ತಿಚಿನ ದಿನದಲ್ಲಿ ಮೇಲ್‍ಸೇತುವೆಯನ್ನು ಕೈ ಬಿಡಲಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ದುಗುಡಕ್ಕೆ ಕಾರಣವಾಗಿದೆ. ಭವಿಷ್ಯದ ಹೊನ್ನಾವರದ ಅಭಿವೃದ್ಧಿಯನ್ನು ಅನುರಕ್ಷಿಸಿ ಮೇಲ್‍ಸೇತುವೆ ಅನಿವಾರ್ಯ ಎಂದರು.
ಎನ್.ಇ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉದ್ಯಮ ಜೆ.ಟಿ. ಪೈ ಮಾತನಾಡಿ ಅವೈಜ್ಞಾನಿಕವಾಗಿ ಪಟ್ಟಣದಲ್ಲಿ ರಸ್ತೆ ನಿರ್ಮಿಸಿದರೆ ಅದು ಜನರಿಗೆ ಮಾರಕವಾಗುತ್ತದೆ. ತಾಲೂಕಿನ ಅಭಿವೃದ್ಧಿ ಕುಂಠಿತಾಗುತ್ತದೆ. ಮೇಲ್‍ಸೇತುವೆ ರಚನೆ ಅವಶ್ಯ ಎಂದರು.
ಕನ್ನಡ ಅಭಿಮಾನಿ ಸಂಘಟನೆಗಳ ಮುಖ್ಯಸ್ಥ ಸತ್ಯಾ ಜಾವಗಲ್ ಮಾತನಾಡಿ 15 ದಿವಸಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮೇಲ್‍ಸೇತುವೆ ಮತ್ತು ಕಾಮಗಾರಿಯ ವಿವರವನ್ನು ನೀಡದೇ ಇದ್ದಲ್ಲಿ. ತಾಲೂಕಿನ ನಾಗರಿಕರು ರಸ್ತೆಗೆ ಇಳಿದು ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಉದಯರಾಜ್ ಮೇಸ್ತ, ರೋಟರಿ ಸಂಸ್ಥೆಯ ರಾಜು ಮಳಗಿಮನೆ, ನಸ್ರುಲ್ಲಾ, ಲಯನ್ಸ್ ಸಂಸ್ಥೆಯ ರಾಜೇಸ್ ಸಾಲೇಹಿತ್ತಲ್, ಶೇಖರ ನಾಯ್ಕ, ನಮ್ಮ ಕರ್ನಾಟಕ ರಕ್ಷಣೆಯ ವೇದಿಕೆಯ ಜಿಲ್ಲಾಧ್ಯಕ್ಷ ಉದಯ ಶಿವಾ ನಾಯ್ಕ, ಸುಧಾಕರ ಹೊನ್ನಾವರ, ಶೇಖರ ವಗ್ಗಾರ, ಹೊನ್ನಾವರ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ನಾಯ್ಕ, ಕಾರ್ಯದರ್ಶಿ ಸೂರಜ ನಾಯ್ಕ, ವಕೀಲರಾದ ಸಂಜು ಕಾಮತ, ನಾಗರಾಜ ಕಾಮತ, ಟೆಂಪೋ ಮಾಲಕ ಚಾಲಕರ ಸಂಘದ ಸಿರಿ ನಾಯ್ಕ ಖರ್ವಾ, ಗಣಪತಿ ನಾಯ್ಕ ಹಡಿನಬಾಳ, ಆಟೋ ಚಾಲಕರ ಸಂಘದ ಜೆ.ಎಸ್. ಡಿಸೋಜಾ, ಕಾರ್ಮಿಕ ಸಂಘಟನೆಯ ಕೇಶವ ತಾಂಡೇಲ್, ಶ್ರೀಕಾಂತ ಮೇಸ್ತ, ಮೀನುಗಾರ ಸಂಘಟನೆಯ ಗಣಪತಿ ತಾಂಡೇಲ್, ಛಾಯಾ ಗ್ರಾಹಕ ಸಂಘಟನೆಯ ಸುರೇಶ ಹೊನ್ನಾವರ, ಯುವ ಬ್ರಿಗೇಡನ ರಾಘು ಮೇಸ್ತ, ಬಿ.ಜೆ.ಪಿ. ಪಕ್ಷದ ವಿಘ್ನೇಶ್ ಚಿಟ್ಟಾಣ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ, ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಕಾಮಗಾರಿ ಸ್ಪಷ್ಟ ಚಿತ್ರಣ, ಚತುಷ್ಪದ ಹೆದ್ದಾರಿಗೆ ಮೇಲ್‍ಸೇತುವೆ, ನಿರ್ಮಿಸಲು ಒತ್ತಾಯಿಸಿ, ಮನವಿ, ಮನವಿ ಸ್ವೀಕರಿಸಿದ ತಹಶೀಲ್ದಾರ, ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಮೇಲ್‍ಸೇತುವೆ, ವಿವಿಧ ಸಂಘಟನೆಗಳು ಸರ್ಕಾರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,057 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...