ಹಳಿಯಾಳ:- ಸಚಿವ ಆರ್.ವಿ.ದೇಶಪಾಂಡೆರವರ ವಿಶೇಷ ಪ್ರಯತ್ನದಿಂದ ಹಳಿಯಾಳದಲ್ಲಿಯ 35 ವರ್ಷ ಹಳೆಯದಾಗಿದ್ದ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ಕಟ್ಟಡ ರೂ.45 ಲಕ್ಷ ವೆಚ್ಚದಲ್ಲಿ ನವೀಕೃತಗೊಂಡಿದ್ದು ರೈತರಿಗೆ ಹಾಗು ಸಿಬ್ಬಂದಿ ವರ್ಗದವರಿಗೆ ಅವಶ್ಯಕವಾದ ಎಲ್ಲ ಸೌಕರ್ಯಗಳು ಹೊಂದಿದೆ ಎಂದು ಎಂಎಲ್ಸಿ ಎಸ್.ಎಲ್.ಘೋಟ್ನೆಕರ ಹೇಳಿದರು.
ಪಟ್ಟಣದ ಬೆಳಗಾಂವ ರಸ್ತೆಯಲ್ಲಿರುವ ಕೃಷಿ ಇಲಾಖೆಯ ನೂತನ ಕಟ್ಟಡವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದ ಘೋಟ್ನಕರ ಕಟ್ಟಡದಲ್ಲಿ ರೈತರಿಗಾಗಿ ಸಕಲ ಸೌಲಭ್ಯಗಳುಳ್ಳ ಸಭಾಭವನ ಕೂಡ ನಿರ್ಮಿಸಲಾಗಿದೆ ಎಂದರು.
2016-17 ಸಾಲಿಗಾಗಿ ರೂ.17.41 ಕೋಟಿ ರೂ.ಗಳಷ್ಟು ಬೆಳೆ ವಿಮೆ ಪರಿಹಾರ ಪಡೆದ ರಾಜ್ಯದಲ್ಲಿಯ ಮೊಟ್ಟಮೊದಲು ತಾಲುಕು ನಮ್ಮದಾಗಿದೆ. ಈ ಹಣ ರೈತರ ಖಾತೆಗಳಿಗೆ ಈಗಾಗಲೇ ಜಮಾ ಮಾಡಲಾಗಿದೆ ಎಂದು ಹೇಳಿ ಜನರ ಸೇವೆಯಲ್ಲಿ ಅವಿರತವಾಗಿ ತೊಡಗಿದ ಸಚಿವ ದೇಶಪಾಂಡೆರವರನ್ನು ಮತದಾರರು ಮರೆಂiÀiಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಘೋಟ್ನೆಕರ ಹಾಗೂ ಜಿ.ಪಂ ಉಪಾಧ್ಯಕ್ಷ ಸಂತೊಷ ರೆಣಕೆ ಕೆಲವು ರೈತರು ಹಾಗೂ ಸ್ವ-ಸಹಾಯ ಸಂಘದ ಮಹಿಳೆಯರಿಗೆ ವಿವಿಧ ಯೋಜನೆಯಡಿ ಸಲಕರಣೆಗಳು ಹಾಗೂ ಬೆಂಕಿ ಅನಾಹುತದಲ್ಲಿ ಬಣವಿಗಳನ್ನು ಕಳೆದುಕೊಂಡರವರಿಗೆ ಪರಿಹಾರ ಚೆಕ್ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕೃಷಿ ಸಮಾಜದ ಅಧ್ಯಕ್ಷ ಶಂಕರ ಕಾಜಗರ, ತಾ.ಪಂ ಅಧ್ಯಕ್ಷೆ ರಿಟಾ ಸಿದ್ಧಿ, ಉಪಾಧ್ಯಕ್ಷೆ ನಿರ್ಮಲಾ ಮಡಿವಾಳ, ತಾ.ಪಂ ಸದಸ್ಯ ದೇಮಾಣಿ ಶಿರೋಜಿ, ಗಿರೀಶ ಠೋಸುರ, ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ, ಸಹಾಯಕ ಕೃಷಿ ನಿರ್ದೇಶಕ ನಾಗೇಶ ನಾಯ್ಕ, ಸುಧಾಕರ ಇತರರು ಇದ್ದರು.
Leave a Comment