ಹೊನ್ನಾವರ: ಪ್ರಭಾತನಗರದಲ್ಲಿರುವ ಲಯನ್ಸ ಸಭಾ ಭವನದಲ್ಲಿ 6ನೇ ರಿಜನ್ 2ನೇ ಜೋನಿನ ಅಡ್ವೆಸರಿ ಸಭೆ ಜೊನ್ ಚೇರಮನ್ ಮಂಜುನಾಥ ಜನ್ನು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜೊನಿನ ಅಡಿಯಲ್ಲಿ ಬರುವ, ಹೊನ್ನಾವರ ಮುರ್ಡೇಶ್ವರ, ಗೋಕರ್ಣ, ಕಾರವಾರ ಕ್ಲಬ್ಗಳ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ಕ್ಲಬ್ಗಳು ನಡೆಸಿದ ಸೇವಾ ಕಾರ್ಯ ಚಟುವಟಿಕೆಗಳ ಬಗ್ಗೆ ವರದಿಯಲ್ಲಿ ತಿಳಿಸಲಾಯಿತು.
ಜೋನಿನಲ್ಲಿ ಬರುವ ಎಲ್ಲ ಕ್ಲಬ್ಗಳು ಉತ್ತಮವಾಗಿ ವಿವಿಧ ಕಾರ್ಯಕ್ರಮ ಮಾಡುತ್ತಿರುವ ಬಗ್ಗೆ ಜೊನ್ ಚೇರಮನ್ ಮಂಜುನಾಥ ಜನ್ನು ಸಂತಸ ವ್ಯಕ್ತಪಡಿಸಿ, ಅಭಿನಂದಿಸಿದರು ಮತ್ತು ಮುಂದಿನ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ಮಾಡಿದರು.
ಜಿ.ಎಂ.ಟಿ. ಕೊ ಒರ್ಡಿನೆಟರ್ ಜಿ.ವಿ.ಜಿಂದಗಿ ಉಪಸ್ಥಿತರಿದ್ದರು.
ಹೊನ್ನಾವರ ಕ್ಲಬ್ನ ಅಧ್ಯಕ್ಷ ರಾಜೇಶ ಸಾಳೇಹಿತ್ತಲ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ ಎಸ್ ವಂದಿಸಿದರು. ಎನ್ ಜಿ. ಭಟ್ಟ, ಜೀವೋತ್ತಮ ನಾಯಕ ನಿರೂಪಿಸಿದರು. ಚರಣ ಎಸ್ ಪ್ರಾರ್ಥಿಸಿದರು. ಡಿ.ಡಿ. ಮಡಿವಾಳ ಧ್ವಜವಂದನೆ ಮಾಡಿದರು. ಖಜಾಂಚಿ ಯೋಗೇಶ ರಾಯಕರ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
Leave a Comment