ಗಾಂಧಿ ಜಯಂತಿಯಂದು ಮಾಡಗೇರಿ ದೇವಾಲಯದ ಬಳಿ ಕೋಳಿ ಅಂಕ ನಡೆಸುತ್ತಿದ್ದ 7 ಜನರನ್ನು ಬಂಧಿಸಿದ ಘಟನೆ ಹೊನ್ನಾವರ ಪೋಲಿಸ್ ಠಾಣಿಯ ವ್ಯಾಪ್ತಿಯಲ್ಲಿ ನಡೆದಿದೆ.
ಗಾಂಧಿ ಜಯಂತಿಯ ದಿನಾಚರಣೆಯಂದು ಮಧ್ಯಾಹ್ನ 3:30 ರ ಸುಮಾರಿಗೆ ಮಾಡಗೇರಿ ದೇವಸ್ಥಾನದ ಸಮೀಪದಲ್ಲಿ ಜೂಜಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಕೋಳಿ ಅಂಕದ ಸಾಮಗ್ರಿಗಳ ಸಮೇತ 7 ಮಂದಿ ಭಂದಿಸಿದ್ದಾರೆ. ಈ ಘಟನೆಗೆ ಸಂಭದಿಸಿದಂತೆ 3 ಪೋಲಿಸರಿಗೆ ಚಳ್ಳೆಹಣ್ನು ತಿನ್ನಿಸಿದ್ದು ಇವರನ್ನು ಬಂದನ ನಡೆಸಲು ಬಲೆ ಬೀಸಿದ್ದಾರೆ. ಈ ಸಂದರ್ಭದಲ್ಲಿ 1150 ನಗದು, 8 ಜೀವಂತ ಕೋಳಿ ,4 ಕೋಳಿಕತ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಹೊನ್ನಾವರ ಪಿಎಸೈ ಸಂತೋಷ ಕಾಯ್ಕಿಣಿ ತಂಡದವರು ಕಾರ್ಯಚರಣಿ ನಡೆಸಿದ್ದು ಹೊನ್ನಾವರ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment