“ ಹೊನ್ನಾವರ . ಗೇರುಸೊಪ್ಪಾ ವಲಯ ಮಟ್ಟದ ಫ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಸರಕಾರಿ ಫ್ರೌಡಶಾಲೆ ಗೇರುಸೊಪ್ಪಾ ಚಾಂಪಿಯನ್ ಆಗಿದ್ದು ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದೆ. ಹುಡುಗರ ಖೋ ಖೋ, ಕಬಡ್ಡಿಯಲ್ಲಿ ರನ್ನರ್ ಅಪ್, ಹೆಣ್ಣು ಮಕ್ಕಳ ಥ್ರೋಬಾಲ್, 4 x 100 ರೀಲೆ ಪ್ರಥಮ, ಚೆಸ್ನಲ್ಲಿ ಸಂದ್ಯಾ ಮೋಹನ ಲಿಂಗಾಯತ (ಬಾಲಕಿ) ಪ್ರತೀಕ ಮೋಹನ ಶೇಟ್ (ಬಾಲಕ) ತೃತೀಯ ಗಿರೀಶ ಕೃಷ್ಣ ಬಾಕಡ 100 ಮೀ ಓಟದಲ್ಲಿ ದ್ವೀತಿಯ 200 ಮೀ ಹಾಗೂ 400 ಮೀ ಪ್ರಥಮ, ಸಚಿನ ಚಂದ್ರಕಾಂತ್ ನಾಯ್ಕ ಚಕ್ರ ಎಸೆತ ಪ್ರಥಮ, ಜಾವೆಲಿನ್ ದ್ವೀತಿಯ , ಪವಿತ್ರಾ ರಮೇಶ ನಾಯ್ಕ 200 ಮೀ ದ್ವೀತಿಯ ಕವಿತಾ ದೇವಪ್ಪ ನಾಯ್ಕ 400 ಮೀ ಓಟ ಪ್ರಥಮ ಸಹನಾ 800 ಮೀ ಓಟ ದ್ವೀತಿಯ ನಿಖಿತಾ ಗುಂಡು ಎಸೆತ ಪ್ರಥಮ, ಮಿಲನ ಚಕ್ರಎಸೆತ ದ್ವೀತಿಯ ಅಭಿಷೇಕ 200 ಮೀ ಓಟ ದ್ವೀತಿಯ ಅಮಿತ್ ಗುಂಡು ಎಸೆತೆ ಪ್ರಥಮ ಭರತ್ ಶಿರಾಳ ಕೊಪ್ಪ ಹರ್ಡಲ್ಸ ದ್ವೀತಿಯ ನಮೃತ ಶಿವಾನಂದ ನಾಯ್ಕ 200 ಮೀ ಓಟ ದ್ವೀತಿಯ ಸ್ಥಾನ ಪಡೆದಿದ್ದು ವಲಯ ಮಟ್ಟದಲ್ಲಿ ಚಾಂಪಿಯನ್ ಆಗಿರುತ್ತಾರೆ. ಈ ಸಾಧನೆಗಾಗಿ ಮುಖ್ಯಾಧ್ಯಾಪಕ ನಾಗರಾಜ ಈಶ್ವರ ಹೆಗಡೆಯವರು ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಜ್ಯೋತಿಪ್ರಭಾರವರನ್ನು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
Leave a Comment