ಹೊನ್ನಾವರ: sÁರವಾಡದಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಕಾಲೇಜು ಯುವಜನೋತ್ಸವದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಒಟ್ಟೂ 8 ಪದಕಗಳನ್ನು ಗೆಲ್ಲುವ ಮೂಲಕ ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜ್ ಜನರಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪ್ರಶಸ್ತಿ ವಿತರಣಾ ಕಾರ್ಯಕ್ರಮ ವಿವಿಯಲ್ಲಿ ನಡೆಯಿತು.ವಿವಿಧ ಸ್ಪರ್ಧೆಗಳು ಹಾಗೂ ವಿಜೇತ ವಿದ್ಯಾರ್ಥಿಗಳ ಹೆಸರು ಇಂತಿದೆ
1.ಶಾಸ್ತ್ರೀಯ ಗಾಯನ ಸೊಲೊ-ಸಂಗೀತಾ ನಾಯ್ಕ(ಪ್ರಥಮ)
2.ಕೊಲಾಜ್-ಅನಿತಾ ಭಟ್ಟ(ಪ್ರಥಮ)
3.ಪಾಶ್ಚಿಮಾತ್ಯ ಗಾಯನ ಸೊಲೊ-ರ್ಯಾನ್ ಫರ್ನಾಂಡಿಸ್(ದ್ವಿತೀಯ)
4.ಭಾರತೀಯ ಸಮೂಹ ಸಂಗೀತ-ಸಂಗೀತಾ ನಾಯ್ಕ,ಪ್ರದೀಪ ನಾಯ್ಕ,ಮಹಾದೇವಿ ಭಟ್ಟ,ಹರ್ಷವರ್ಧನ್ ಆರ್,ಬಿ.ಎಚ್.ಪ್ರಥ್ವಿ,ರ್ಯಾನ್ ಫರ್ನಾಂಡಿಸ್,ವಿನಾಯಕ ಭಟ್ಟ,ರಮ್ಯಾ ನಾಯ್ಕ(ದ್ವಿತೀಯ)
5.ಪಾಶ್ಚಿಮಾತ್ಯ ಸಮೂಹ ಗಾಯನ-ಇಸಾಬೆಲ್ಲಾ ಬರಾಟೋ,ರ್ಯಾನ್ ಫರ್ನಾಂಡಿಸ್,ಲಿಶಾ ರೊಡ್ರಗೀಸ್,ಮೆರ್ಲಿನ್ ಲೋಪಿಸ್,ಪ್ರದೀಪ ನಾಯ್ಕ,ಜುಲಿಯಸ್ ನೊರೊನಾ(ಪ್ರಥಮ)
6.ಇನ್ಸ್ಟಾಲೇಶನ್-ಸಿಂಚನಾ ನಾಯ್ಕ,ನಿಖಿತಾ ನಾಯ್ಕ,ಯುಕ್ತಾ ಭಟ್ಟ,ಕೃಷ್ಣ ಗೌಡ(ದ್ವಿತೀಯ)
7.ಮಿಮಿಕ್ರಿ-ಸಂದೀಪ ಭಟ್ಟ(ದ್ವಿತೀಯ)
8.ಸ್ಥಳದಲ್ಲೇ ಚಿತ್ರ ಬಿಡಿಸುವುದು-ಪ್ರಭು ಗೊಲ್ಲಾರ(ತೃತೀಯ)
ಎಂಪಿಇ ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ,ಆಡಳಿತ ಮಂಡಳಿಯ ಸದಸ್ಯರು,ಪ್ರಾಚಾರ್ಯೆ ಡಾ.ವಿಜಯಲಕ್ಷ್ಮೀ ಎಂ.ನಾಯ್ಕ,ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ವಿಜೇತರನ್ನು ಅಭಿನಂದಿಸಿದ್ದಾರೆ.
Leave a Comment