ಹಳಿಯಾಳ: ಧರ್ಮ ರಕ್ಷಣೆಯ ಮತ್ತು ರಾಷ್ಟ್ರ ಪ್ರೇಮದ ಜಾಗರಣೆಯ ಸಲುವಾಗಿ ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳ ಪಟ್ಟಣದಲ್ಲಿ 9 ದಿನಗಳ ಕಾಲ ನಡೆಯುವ ದುರ್ಗಾದೌಡ ಧಾರ್ಮಿಕ ನಡಿಗೆ ಬುಧವಾರ ದಿ.10ರಂದು ಶ್ರೀ ಗಣೇಶ ಕಲ್ಯಾಣ ಮಂಟಪದಿಂದ ಆರಂಭವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಶ್ರೀ ಗಣೇಶ ದೇವಸ್ಥಾನದಲ್ಲಿ ದಿ.10ರಂದು ಬೆಳಿಗ್ಗೆ 5.30 ಗಂಟೆಗೆ ಭಗವಾ ಧ್ವಜ ಹಾಗೂ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ದುರ್ಗಾದೌಡಗೆ ಚಾಲನೆ ನೀಡಲಾಗುವುದು ಅಲ್ಲಿಂದ ಪೋಲಿಸ್ ಲೈನ್ನಲ್ಲಿರುವ ದುರ್ಗಾದೇವಿ ಮಂದಿರಕ್ಕೆ ಆಗಮಿಸಿ ದೌಡ ಒಂದು ದಿನ ಪೂರೈಸಲಿದೆ. 11ಕ್ಕೆ ದುರ್ಗಾದೇವಿ ದೇವಸ್ಥಾನದಿಂದ, ದಿ.12ರಂದು ಸಿದ್ದರಾಮೇಶ್ವರ ದೇವಸ್ಥಾನ, ದಿ.13-ಚವಾಟೆಪ್ಪಾ ದೇವ್ಥಾನ, ದಿ.14-ಕಸಬಾಗಲ್ಲಿಯ ಮಾರುತಿ ದೇವಸ್ಥಾನದಿಂದ, ದಿ.15ರಂದು ವೀರಕ್ತಮಠದಿಂದ, ದಿ.16-ಪೇಟೆ ಬಸವೇಶ್ವರ ದೇವಸ್ಥಾನ, ದಿ.17-ಶ್ರೀ ದುರ್ಗಾದೇವಿ ದೇವಸ್ಥಾನ ಹಾಗೂ ದಿ.18 ರಂದು ತುಳಜಾಭವಾನಿ ದೇವಸ್ಥಾನದಿಂದ ಹಳಿಯಾಳದ ಗ್ರಾಮದೇವಿ ಉಡಚಮ್ಮಾ-ಲಕ್ಷ್ಮೀ ದೇವಿ ದೇವಸ್ಥಾನದ ವರೆಗೆ ದುರ್ಗಾದೌಡ-ಧಾರ್ಮಿಕ ನಡಿಗೆ ನಡೆದು ಸಮಾರೋಪಗೊಳ್ಳಲಿದೆ.
ಅದ್ದೂರಿಯಾಗಿ ನಡೆಯುವ ಸಮಾರೋಪ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಹಿಂದೂ ಮುಖಂಡರು ಪ್ರಮುಖವಾಗಿ ಮಂಗಳೂರಿನ ಚೈತ್ರಾ ಕುಂದಾಪುರ ಬೋಧಕರಾಗಿ ಆಗಮಿಸಲಿದ್ದಾರೆಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.
Leave a Comment