ಹೊನ್ನಾವರ: ತಾಲೂಕಿನ ಸರಕಾರಿ ಪ್ರೌಢಶಾಲೆ ಮಂಕಿ ಯಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ದಸರಾ ವಿಶೇಷ 25 ದಿನಗಳ ಬೋಧನಾ ಕಾರ್ಯಕ್ರಮವಾದ “ ವಿಶ್ವಾಸ ಕಿರಣ “ ವನ್ನು ತಾಲೂಕಾ ಪಂಚಯತಿ ಕಾರ್ಯನಿರ್ವಾಹಕ ಆಧಿಕಾರಿ ಸುರೇಶ ನಾಯ್ಕ ಇವರು ಉದ್ಘಾಟಿಸಿದರು. ನಂತರ ಮಾತನಾಡಿ ವಿದ್ಯಾರ್ಥಿಗಳಿಗೆ ಸರಕಾರದ ಈ ಕಾರ್ಯಕ್ರಮವು ವಿದ್ಯಾರ್ಥಿಗಳಗೆ ಪರೀಕ್ಷೆಯನ್ನು ಎದುರಿಸಲು ಆತ್ಮವಿಶ್ವಾಸ ಹೆಚ್ಚಿಸಲಿದೆ. ಗಣಿತ ವಿಜ್ಞಾನ & ಇಂಗ್ಲೀಷೆ ವಿಷಯಗಳಲ್ಲಿ ಕಲಿಕಾಂಶಗಳ ಪರಿಕಲ್ಪನೆಯನ್ನು ಮೂಡಿಸುವಲ್ಲಿ ಪರಿಣಾಮಕಾರಿಯಾಗಲಿದೆ ಎಂದರು. ಬಿ.ಆರ್.ಸಿ.ಯ ಸಮನ್ವಯ ಅಧಿಕಾರಿÀ ಶ್ರೀಧರ ದುರ್ಗಾಕೇರಿ ಯವರು ಮಾತನಾಡಿ 25 ದಿನಗಳ ಬೋಧನಾ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯುವಂತೆ ತಿಳಿಸಿದರು , ಶಾಲೆಯ ಮುಖ್ಯಶಿಕ್ಷಕಿ ವಿದ್ಯಾ ನಾಯಕ ಕೇಂದ್ರದ ನೋಡೆಲ್ ಅಧಿಕಾರಿ ದೀಪಕ ನಾಯ್ಕ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಿಧಿ ಹೆಗಡೆ, ಜಿ.ಆರ್. ಶೆಟ್ಟಿ ಹಾಗೂ ರೂಪಾ ನಾಯ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .
Leave a Comment