ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲಿಷ ಸ್ಕೂಲ್ ಕನ್ನಡ ಮಾಧ್ಯಮದಲ್ಲಿ ಕೇಂದ್ರ ಸರ್ಕಾರ ನೀತಿ ಆಯೋಗದ ಅಡಿಯಲ್ಲಿ ಆರಂಭವಾಗಿರುವ ಅಟಲ್ ಟಿಂಕರಿಂಗ ಲ್ಯಾಬ್ನಲ್ಲಿ ಎರಡು ದಿನಗಳ ಕಾಲ ವಿದ್ಯಾರ್ಥಿಗಳ ಮನೋವೈಜ್ಞಾನಿಕ ವಿಕಾಸಕ್ಕೆ ಪೂರಕವಾಗಿ ತರಭೇತಿಯನ್ನು ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳು ರೋಬೋಟ ಕಾರ್ಯವಿಧಾನ, ರಿಮೋಟ ಕಂಟ್ರೋಲ್ಗಳ ತಯಾರಿ, ಸೆನ್ಸರ್ಗಳ ಬಳಕೆ, 3ಡಿ ತಂತ್ರಜ್ಞಾನದ ಬಳಕೆ ಮುಂತಾದ ಹೊಸ ಸಾಧನಗಳು ಮತ್ತು ಉಪಯೋಗದ ಕುರಿತು ಅರಿತುಕೊಂಡರು. ಇದೊಂದು ಅತ್ಯುತ್ತಮವಾದ ಯೋಜನೆಯಾಗಿದ್ದು ತಾಲೂಕಿನ ಆಸಕ್ತ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಬಹುದು ಎಂದು ಲ್ಯಾಬಿನ ಇನ್ಚಾರ್ಜ ಶಿಕ್ಷಕರಾದ ಶ್ರೀ ಎಲ್.ಜಿ.ಭಟ್ಟ ತಿಳಿಸಿದರು. ಮುಖ್ಯಾಧ್ಯಾಪಕರಾದ ಶ್ರೀ ವಿ.ಎನ್.ಅವಧಾನಿ ಹಾಗೂ ತಾಂತ್ರಿಕ ಮಾರ್ಗದರ್ಶಕರಾದ ಶ್ರೀ ಪ್ರಭಾಸ್ ಉಪಸ್ಥಿತರಿದ್ದರು.
Leave a Comment