ಹೊನ್ನಾವರ : ತಾಲೂಕಿನ ಹಡಿನಬಾಳ ಗ್ರಾಮದ ಪುಟ್ಟ ಜನತಾಕೇರಿಯಲ್ಲಿ ಇರುವ ಚಿಕ್ಕ ಮತ್ತು ಚೊಕ್ಕ ಶಾಲೆಯೇ ಕಿರಿಯ ಪ್ರಾಥಮಿಕ ಶಾಲೆ, ಜಂಬೊಳ್ಳಿ. ಈ ಶಾಲೆಯಲ್ಲಿ ಕೆಲವೆ ಮಕ್ಕಳ್ಳಿದ್ದು, ಕಳೆದ 23 ವರ್ಷದಿಂದ ಸಾರ್ವಜನಿಕರ ಸಹಕಾರದಿಂದ ಹಾಗೂ ಶಿಕ್ಷಣ ಇಲಾಖೆಯಿಂದ ನಡೆದುಕೊಂಡು ಬಂದಿರುವುದು ಶ್ಲಾಘನೀಯವಾದದ್ದು. ಸರ್ವಪÀಳಿ ರಾಧಾಕೃಷ್ಣರವರ ನಡೆ, ನುಡಿ, ಆಚಾರ, ವಿಚಾರ ಹಾಗೂ ಸಂಸ್ಕøತಿಯಲ್ಲಿ ನಡೆದುಕೊಂಡು ಕುಟುಂಬದಲ್ಲಿ ಮಕ್ಕಳಿಗೆ ತಾಯಿಯ ಆಸರೆ ನೀಡಿದ ಹಾಗೆ. ಶಾಲೆಯಲ್ಲಿ 21 ವರ್ಷ ಎಲ್ಲಾ ಮಕ್ಕಳಿಗೆ ಮಹಾತಾಯಿಯ ಹಾಗೆ ಉತ್ತಮ ಆಸರೆ ನೀಡಿ ಕಲಿಕೆಗೆ ಉತ್ತೇಜನ ನೀಡಿದವರೆ, ಶ್ರೀಮತಿ ಶಾಲಿನಿ ಸಿ. ಶಾನಭಾಗ ಆಗಿದ್ದಾರೆ. ಇವರು ಸಿರ್ಸಿ, ಭಟ್ಕಳ, ಖರ್ವಾ ಶಾಲೆಯಲ್ಲಿ ಸೇವೆ ನೀಡಿ ಪ್ರಸ್ತುತ ಜಂಬೋಳ್ಳಿ ಶಾಲೆಯಲ್ಲಿ ಸೇವೆ ಮಾಡುತ್ತಿರುವಾಗಲೇ 2018-19 ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಎಂದು ಪ್ರಶಸ್ತಿ ಪಡೆದರು. ಈ ದಿಟ್ಟಿನಲ್ಲಿ ಜನತಾಕೇರಿಯ ಉತ್ಸಾಹಿಗಳಾದ ಹೆಂಡ್ರಿಕ್, ಆನಂದ, ಸುರೇಶ, ಗಜಾನನ, ಪಾಂಡು ಹಾಗೂ ಸಮಸ್ತ ಬಾಂಧವರ ಸಹಕಾರದಿಂದ ಶ್ರೀಮತಿ ಶಾಲಿನಿಯವರಿಗೆ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ನಾನು ಸೇವೆ ಮಾಡುತ್ತಿರುವ ಶಾಲೆ ಜ್ಞಾನದ ದೇಗುಲ ಹಾಗೂ ಇನ್ನೊಂದು ಮನೆ ಇದ್ದಂತೆ, ಸುದೀರ್ಘವಾಗಿ ನಾನು ನೀಡಿದ ಸೇವೆಗಾಗಿ ಹಾಗೂ ಮಕ್ಕಳಲ್ಲಿ ಪಾಲಕರಲ್ಲಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ, ಎಸ್.ಡಿ.ಎಂ.ಸಿ.ಯವರಲ್ಲಿ, ಊರ ನಾಗರಿಕರಲ್ಲಿ ಹಾಗೂ ಹಿರಿ-ಕಿರಿಯರಲ್ಲಿ ನಾನು ಇಟ್ಟಿರುವ ಪ್ರೀತಿಯ ಸಂಪರ್ಕ ಹಾಗೂ ಉತ್ತಮ ಬಾಂದವ್ಯಕ್ಕೆ ನನ್ನನ್ನು ಪ್ರಶಸ್ತಿ ಹುಡುಕಿಕೊಂಡು ಬಂದಿತು. ಪ್ರಶಸ್ತಿಗೋಸ್ಕರ ನಾನು ಯಾವತ್ತು ಕೆಲಸ ಮಾಡುವುದಿಲ್ಲ. ಮಕ್ಕಳ ಸರ್ವಾಂಗೀಣ ಬದುಕಿಗೆ ಪ್ರೇರಣೆ ನೀಡಿ ಉತ್ತಮ ಪ್ರಜೆಯಾಗಿ ಮಾಡುವುದೇ ನನ್ನ ಗುರಿ ಎಂದು ಮಾರ್ಮಿಕವಾಗಿ ನುಡಿದರು.
ಬಳಿಕ ಇದರ ಜೊತೆ ಸೇನೆಯಲ್ಲಿ 20 ವರ್ಷ ಸೇವೆ ನೀಡಿದ ಶ್ರೀಯುತ ಜೈಮನ ಫರ್ನಾಂಡಿಸರವರಿಗೆ ಸನ್ಮಾನಿಸಲಾಯಿತು. ಪಂಜಾಬ, ಜಾನ್ಸಿ, ಜಮ್ಮುಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ನನಗೆ ತೃಪ್ತಿವಿದೆ. ಬೇರೆ ರಾಜ್ಯದ ಪ್ರತಿಯೊಂದು ಕುಟುಂಬದಲ್ಲಿ ಒಬ್ಬೊಬ್ಬ ಯೋಧ ಇದ್ದಾರೆ. ಆದರೆ ನಮ್ಮಲ್ಲಿ ಯೋಧರ ಸಂಖ್ಯೆ ಬಹಳ ಕಡಿಮೆ. ಸಾವು, ನೋವು, ಕಷ್ಟ ಎಲ್ಲಿ ಇದ್ದರು ಬರುತ್ತದೆ. ಕೇವಲ ಯೋಧನಾದರೆ ಮಾತ್ರ ಸಾವು ಬರುತ್ತದೆ ಎಂಬ ತಪ್ಪು ಕಲ್ಪನೆಯಾಗಿದೆ. ಯೋಧರಾಗಿ ಸೇವೆ ನೀಡಲು ಮುಂದಾಗುವ ಯುವಕರಿಗೆ ನನ್ನಿಂದ ಆಗುವ ಮಾರ್ಗದರ್ಶನ ನೀಡುತ್ತೇನೆಂದು ಹೇಳಿದರು.
ಕಲೆಯಲ್ಲಿ ಮಿಂಚಿದ ಮತ್ತೋರ್ವ ಯಕ್ಷಗಾನ ಕಲಾವಿದ. ಶ್ರೀಯುತ ಶ್ರೀಪಾದ ಹೆಗಡೆಯವರಿಗೆ ಸನ್ಮಾನಿಸಲಾಯಿತು. ಕಲೆಯು ಹಸಿರು ಎಲೆ ಇದ್ದ ಹಾಗೆ. ಪುರಾತನ ಕಾಲದಿಂದಲೂ ಬಂದಿರುವ ಯಕ್ಷಗಾನ. ಒಮ್ಮೆಲೆ ಮೆರು ನಟನಾಗಿ ಹೊರ ಚಿಮ್ಮಲು ಸಾಧ್ಯವಿಲ್ಲ. ಹಿತ್ತಲಿನ ಬಳ್ಳಿ ಮನೆ ಮದ್ದು ಆದ ಹಾಗೆ. ಪ್ರಾರಂಭದಲ್ಲಿ ಅಡುಗೆ ಭಟ್ಟನಾಗಿ ಸೇವೆ ಮಾಡಿ ಯಕ್ಷಗಾನದಲ್ಲಿ ಬರುವ ಪ್ರಮುಖ ಪಾತ್ರ ಮಾಡಲು ಅನುಕೂಲವಾಯಿತು ಎಂದು ತಮ್ಮ ಕಲಾ ಸಂಸ್ಕøತಿ ಬಿಚ್ಚಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎನ್.ಎಸ್. ನಾಯ್ಕರವರು ಮಾತನಾಡಿ ಸಾರ್ವಜನಿಕರಲಿ ಹಾಗೂ ಶ್ರೀಮತಿ ಶಾಲಿನಿ ಶಾನಭಾಗರವರಲಿ ಇರುವ ಸಂಪರ್ಕದ ಪ್ರೀತಿ ಈ ಸಭೆಯು ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು. ಸಿ.ಆರ್.ಪಿ. ಹಡಿನಬಾಳ ಶ್ರೀಯುತ ಜಿ.ಆರ್.ಭಟ್ಟ ಗ್ರಾಂ. ಪಂಚಾಯತ ಅಧ್ಯಕ್ಷರಾದ ಚಂದ್ರಹಾಸ ನಾಯ್ಕ, ಹುಡಗೋಡ, ಊರಿನ ಹಿರಿಯರಾದ ಗಣಪತಿ ಕೆ. ನಾಯ್ಕ, ಜಿ. ಎಂ. ಭಟ್ಟ, ವಸಂತ ನಾಯಕ, ದಾಸ ಮಹಾಲೆ, ಶ್ರೀಮತಿ ಮಮತಾ ಮೇಸ್ತ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಕೈಗೊಳ್ಳಲಾಯಿತು. ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶ್ರೀಮತಿ ಸವಿತಾ ಜಿ. ನಾಯ್ಕ ಸ್ವಾಗತಿಸಿ, “ಉಜ್ವಲ್” ಕೊಂಕಣಿ ಪತ್ರಿಕೆಯ ಸಂಪಾದಕರಾದ ಸುರೇಶ ಲೋಪಿಸ್ ಕಾರ್ಯಕ್ರಮ ನಿರ್ವಹಿಸಿದರು.
Leave a Comment