ಹಳಿಯಾಳ: ಪಟ್ಟಣದ ಪ್ರಸಿದ್ದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ವಿವಿಧ ಸಾಂಸ್ಕøತೀಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದೆ.
ಪ್ರತಿನಿತ್ಯ ಪೂಜೆ, ಹೋಮ ಹವನ, ಅಲಂಕಾರ, ರುದ್ರಾಭಿಷೇಕದೊಂದಿಗೆ ಪೂಜಾ ಕಾರ್ಯ ನಡೆಯುತ್ತಿದೆ. ದಿ.17 ರಂದು ಶ್ರೀ ನವಚಂಡಿ ಹವನ ದಿ. 18 ರಂದು ಗುರುವಾರ ಅಶ್ವಿಜ ಶುದ್ಧ ನವಮಿ ಹಾಗೂ ವಿಜಯದಶಮಿ ಕಾರ್ಯಕ್ರಮ, ಶಮಿ ಪೂಜನ, ಊಡಿ ತುಂಬುವುದು ಹಾಗೂ ದಸರಾ ಆಚರಣೆ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಕುಟುಂಬದವರು, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹಾಗೂ ಇತರ ಪ್ರಮುಖ ಗಣ್ಯರು ಪ್ರಮುಖ ಹೋಮ-ಹವನದಲ್ಲಿ ಭಾಗವಹಿಸಲಿದ್ದಾರೆ. ದಿ. 16 ರಂದು ಪ್ರಶಾಂತ ದಿಕ್ಷೀತ್ ಧಾರವಾಡ ಹಾಗೂ ಸಂಗಡಿಗರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ತುಳಜಾಭವಾನಿ ಧಾರ್ಮಿಕ ಶೈಕ್ಷಣಿಕ ಮತ್ತು ಧರ್ಮಾರ್ಥ ಟ್ರಸ್ಟ್ ಸಮೀತಿಯವರು ತಿಳಿಸಿದ್ದಾರೆ.
Leave a Comment