ಗೋಕರ್ಣ:- ಕುಡ್ಲೆ ತೀರದಲ್ಲಿ ಸತತ ನಾಲ್ಕು ದಿನದ ರಜೆಯ ಪ್ರಯುಕ್ತ ಗೋಕರ್ಣಕ್ಕೆ ಆಗಮಿಸಿದ ಪ್ರವಾಸಿಗರು, ಲೈಫ್ ಗಾರ್ಡ ಮಾತನ್ನು ಲೆಕ್ಕಿಸದೇ ಸಮುದ್ರದಲ್ಲಿ ಈಜಲು ಹೋಗಿ ಜೆಲ್ಲಿ ಮೀನಿಗೆ ಆಹಾರವಾಗಿ ಬಂದಿದ್ದಾರೆ. ಸಮುದ್ರದ ತಳದಲ್ಲಿ ಪಿಟ ಪಿಟ ಲವಲವಿಕೆಯಿಂದ ಓಡಾಡುತ್ತಿರುವ ಈ ಜೆಲ್ಲಿಫಿಶ್ಗಳು ಚಿಕ್ಕದಾಗಿದ್ದರೂ ಅಷ್ಟೇ ಅಪಾಯಕಾರಿಯಾಗಿದ್ದು 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಚ್ಚಿಸಿಕೊಂಡು ಉರಿ ತಾಳಲಾಗದೆ ಒದ್ದಾಡಿದ ಘಟನೆ ಗೋಕರ್ಣದ ಕುಡ್ಲೆ ತೀರದಲ್ಲಿ ಕಂಡು ಬಂದಿದೆ.
ಕಚ್ಚಿಸಿಕೊಂಡು ಒದ್ದಾಡುತಿದ್ದ ಪ್ರವಾಸಿಗರನ್ನು ಪ್ರವಾಸೊಧ್ಯಮ ಇಲಾಖೆಯ ಲೈಫ್ ಗಾರ್ಡ ಮತ್ತು ಪೊಲೀಸರು ಪ್ರಥಮ ಚಿಕಿತ್ಸೆಯನ್ನು ನೀಡಿ ತಮ್ಮ ಕರ್ತವ್ಯವನ್ನು ಯಶ್ವಸಿಯಾಗಿ ಮುಂದುವರೆಸಿದ್ದರೆ.
Leave a Comment