ಕ್ರೀಡಾಳುಗಳು ದೇಶದ ಗೆಲುವಿಗೆ ಚಿಂತಸಬೇಕು ವಯಕ್ತಿಕ ಗೆಲುವಿನ ಜೊತೆಗೆ ದೇಶದ ಹೊರಗೆ ವಿಜಯ ಪತಾಕೆ ಹಾರಿಸುವ ನಿಟ್ಟಿನಲ್ಲಿ ತನ್ನ ದೇಶದ ಗೆಲುವಿಗೆ ಪ್ರತಿಯೊಬ್ಬ ಕ್ರೀಡಾಪಟುವಿನ ಮಹತ್ವಾಕಾಂಕ್ಷೆ ಇರಬೇಕು ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಲಹೆ ನೀಡಿದರು.
ಇಲ್ಲಿಯ ಎಸ್.ಡಿ.ಎಂ. ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳವಾರ ಮುಕ್ತಾಯಗೊಂಡ 3 ದಿನಗಳ ಕವಿವಿ ಅಂತರ್ಕಾಲೇಜು 68ನೇ ಅಥ್ಲೆಟಿಕ್ ಕ್ರೀಡಾಕೂಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಅಂತರಾಷ್ಟ್ರೀಯ ಕ್ರೀಡಾಪಟುಮ್ಗವ ಶಕ್ತಿ ಭಾರತೀಯ ಕ್ರೀಡಾಪಟುಗಳಲ್ಲಿದ್ದು ಅವರ ಯೋಚನೆಯ ರೀತಿ ಬದಲಾಗಬೇಕಿದೆ.ಬದುಕಿನಲ್ಲಿ ಆಟವನ್ನು ಗಂಭೀರವಾಗಿ ಸ್ವೀಕರಿಸುವ ಮನೋವೃತ್ತಿ ಎಲ್ಲರಲ್ಲಿಯೂ ಅಗತ್ಯ’ ಎಂದು ಅವರು ಹೇಳಿದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ,”ಭಟ್ಕಳ,ಹೊನ್ನಾವರ ಹಾಗೂ ಕುಮಟ ತಾಲ್ಲೂಕುಗಳ ಕ್ರೀಡಾಳುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಸ್ಡಿಎಂ ಕಾಲೇಜಿನ ವಿಶಾಲ ಕ್ರೀಡಾಂಗಣಕ್ಕೆ ಸ್ಟೇಡಿಯಂ ನಿರ್ಮಿಸುವ ನಮ್ಮ ಪ್ರಯತ್ನಕ್ಕೆ ಸಚಿವ ಅನಂತಕುಮಾರ ಹೆಗಡೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಶಾಸಕ ಸುನೀಲ್ ನಾಯ್ಕ ಮಾತನಾಡಿ,’ಎಲ್ಲ ವ್ಯವಸ್ಥೆಗಳಿದ್ದರೂ ಇಂದಿನ ಯುವಕರಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ’. ನಾನು ಈ ಮಟ್ಟಕ್ಕೆ ಬೆಳೆಯಲು ನನ್ನ ಕ್ರೀಡಾ ಪ್ರತಿಭೆಯೆ ಕಾರಣ ಮುಂದಿನ ದಿನದಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿಯೂ ಕ್ರೀಡೆ ಹಾಗೂ ಶಿಕ್ಷಣ ವಿಷಯದಲ್ಲಿ ಎಂದು ವಿಷಾದಿಸಿದರು.
ಎಂಪಿಇ ಸೊಸೈಟಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಂಪಿಇ ಸೊಸೈಟಿಯ ಖಜಾಂಚಿ ಉಮೇಶ ನಾಯ್ಕ,ಸದಸ್ಯ ನಾಗರಾಜ ಕಾಮತ,ಕ್ರೀಡಾ ತರಬೇತುದಾರರಾದ ಶಕುಂತಲಾ ಹಿರೇಮಠ,ದೈಹಿಕ ಶಿಕ್ಷಣ ನಿರ್ದೇಶಕ ಆರ್.ಕೆ.ಮೇಸ್ತ ಉಪಸ್ಥಿತರಿದ್ದರು.
ಕ್ರೀಡಾಕೂಟಕ್ಕೆ ಸಹಕರಿಸಿದ ವಿ.ಎಚ್.ಕಲಾದಗಿ ಹಾಗೂ ಉಮೇಶ ಭಟ್ ಅಶ್ವಿನ್ ಆರ್ ಇವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯೇ ಡಾ.ವಿಜಯಲಕ್ಷ್ಮೀ ಎಂ.ನಾಯ್ಕ ಸ್ವಾಗತಿಸಿದರು. ನಾಗರಾಜ ಹೆಗಡೆ, ಪ್ರಶಾಂತ ಮೂಡಲಮನೆ ನಿರೂಪಿಸಿದರು. ಪ್ರೊ.ಗೋಪಾಲಕೃಷ್ಣ ಹೆಗಡೆ ವಂದಿಸಿದರು.
Leave a Comment