ಹೊನ್ನಾವರ:
ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ತಂದಿದೆ ಆದರೆ ಅದನ್ನು ಸಮರ್ಪಕವಾಗಿ ಅನುಷ್ಟಾನ ಮಾಡುವ ಕೆಲಸ ರಾಜ್ಯ ಸರ್ಕಾರದ್ದಾಗಿದೆ. ಆದರೆ ಆ ಕೇಲಸ ರಾಜ್ಯ ಸರ್ಕಾರ ಮಾಡದೇ ಇರುವ ಪರಿಣಾಮವೇ ನಮ್ಮ ಪರಿಸ್ಥಿತಿಯಲ್ಲಿ ಯಾವುದೆ ಸುಧಾರಣೆ ಕಾಣುತ್ತಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಕೇಂದ್ರ ಸಚೀವ ಅನಂತಕುಮಾರ ಹೆಗಡೆ ಗಂಭೀರ ಆರೋಪ ಮಾಡಿದರು.
ಅವರು ಹೊನ್ನಾವರ ತಾಲೂಕಿನ ಮಾಗೋಡ ಭಾಗದಲ್ಲಿ ಹಮ್ಮಿಕೊಂಡ ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಸಾರ್ವಜನಿಕ ಸಭೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಸಂವಿಧಾನದ ನಿಯಮಾವಾಳಿಯ ಪ್ರಕಾರ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ರಾಜ್ಯದ ಮೂಲಕ ಅನುಷ್ಟಾನ ಮಾಡಬೇಕಾಗುತ್ತದೆ. ಆದರೆ ನಮ್ಮ ರಾಜ್ಯದಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಬದಲಿಗೆ ತಮ್ಮದೇ ಹೊಸ ಯೋಜನೆ ಪ್ರಾರಂಭಿಸಲು ಹೋಗಿ ಎಡವಟ್ಟು ಮಾಡುತ್ತಾ ಬಂದಿದ್ದಾರೆ. ಒಂದು ರೀತಿಯಲ್ಲಿ ಉತ್ತರಪೌರುಷ ತೋರುತ್ತಾ ಅತ್ತ ಯೋಜನೆಯು ಕಾರ್ಯನಿರ್ವಹಿಸದೇ ಇತ್ತ ಜನಸಾಮನ್ಯರಿಗೂ ಪ್ರಯೋಜನವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಜಗತ್ತಿನಲ್ಲಿಯೇ ಆರೋಗ್ಯ ಸುಧಾರಿಸಲು ಆಯುಷ್ಮಾನ ಯೋಜನೆ ಜಾರಿಗೋಳಿಸಿದರೆ ಇವರು ಆರೋಗ್ಯ ಕರ್ನಾಟಕ ಮಾಡುತ್ತಾರೆ. ನಾವು ಉಜ್ವಲ ಯೋಜನೆ ಮಾಡಿದರೆ ಇತ್ತ ಅನಿಲ ಭಾಗ್ಯ ಯೋಜನೆ ತರುತ್ತಾರೆ ಇದರ ಪ್ರಯೋಜನವನ್ನು ನೋಡಿದರೆ ಇದುವರೆಗೂ ಒಂದೆ ಒಂದು ಅನಿಲವನ್ನು ವಿತರಿಸಿಯೇ ಇಲ್ಲ ಆದರೂ ನಾವು ಅನಿಲ ಭಾಗ್ಯ ನೀಡುತ್ತಿದ್ದೆವೆ ಎನ್ನುವ ಹೇಳಿಕೆಯನ್ನು ನೀಡುತ್ತಾರೆ. ವಿದ್ಯುತ್ ಸಮಸ್ಯೆ ಬಗ್ಗೆ ಕೇಂದ್ರದತ್ತ ಬೆರಳು ತೋರಿಸುವ ಮುಖ್ಯಮಂತ್ರಿಗಳಿಗೆ ನಾನು ಹೇಳುವುದೆನೆಂದರೆ ಕಲ್ಲಿದ್ದಲು ಬೇಡ ವಿದ್ಯತ್ಅನ್ನೆ ನೀಡುತ್ತೇವೆ ತೆಗೆದುಕೊಳ್ಳಿ ಎಂದು ಆಗ್ರಹಿಸಿದರು. ಎಲ್ಲಿಯವರೆಗೆ ನಮ್ಮ ರಾಜ್ಯದಲ್ಲಿ ಗಂಜಿಗಿರಾಕಿಗಳು ಅಧಿಕಾರದಲ್ಲಿ ಇರುತ್ತಾರೆಯೊ ಅಲ್ಲಿಯವರೆಗೆ ಯಾವುದೇ ರೀತಿಯ ಅಭಿವೃದ್ದಿ ಸಾಧ್ಯವಿಲ್ಲ. ಸಾಲಮನ್ನಾ ಎಂದು ಹೇಳುತ್ತಾ ಎಲ್ಲಾ ಹಣವನ್ನು ಸುರಿಯುತ್ತಾ ಸಮರ್ಪಕವಾಗಿ ಸಾಲ ಮನ್ನಾ ಮಾಡದೇ ಅಭಿವೃದ್ದಿಯನ್ನು ಕಡೆಗಣಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಆಕ್ರೂಶ ವ್ಯಕ್ತಪಡಿಸಿದರು. ಇತ್ತಿಚೀಗೆ ಸುಪ್ರೀಕೊರ್ಟ ಶಬರಿಮಲೆಯ ಕುರಿತು ನೀಡಿದ ತೀರ್ಪ ಸರಿಯಾಗಿಯೇ ಇದೆ. ಮಹಿಳೆಯರಿಗೆ ಸಮಾನತೆ ಬೇಕು ನಿಜ ಆದರೆ ನಮ್ಮ ಭಾವನೆಯನ್ನು ಪರಿಗಣಿಸಿ ಅದಕ್ಕೆ ನೋವುಂಟಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಸಾರ್ವಜನಿಕರ ಜೊತೆ ಸಂವಾದದಲ್ಲಿ ಉತ್ತರಿಸಿದ ಸಚೀವರು ಬೆಳೆವಿಮೆಯಲ್ಲಿ ಸಮಸ್ಯೆ ಆಗಿದೆ ದೊಡ್ಡಮಟ್ಟದ ಯೋಜನೆ ಅನುಷ್ಟಾನದಲ್ಲಿ ಸಮಸ್ಯೆ ಇದ್ದರು ರೈತರು ಪ್ರತಿ ಬಾರಿ ಕಣ್ಣಿರು ಹಾಕುವುದನ್ನು ತಪ್ಪಸಲು ಈ ಯೋಜನೆ ತಂದಿದ್ದೇವೆ ಇದನ್ನು ಸಮರ್ಪಕವಾಗಿ ಅನುಷ್ಟಾನ ಮಾಡುವ ಕೆಲಸ ಅಧಿಕಾರಗಳದ್ದು ಅದನ್ನು ಮುಂದಿನ ದಿನದಲ್ಲಿ ಸರಿಪಡಿಸುತ್ತೇವೆ ಎಂದರು. ಅತಿಕ್ರಮಣ ಸಮಸ್ಯೆಯ ಬಗ್ಗೆ ಉತ್ತರಿಸಿ ಇದು ಸುಪ್ರಿಂಕೊರ್ಟ ತೀರ್ಮಾನವಾಗಿದ್ದು ಪರಿಸರ ಹಾಗೂ ನ್ಯಾಯಲಯದ ಆದೇಶಕ್ಕೆ ಬೆಲೆ ಕೊಟ್ಟು ನಾವು ಕಾರ್ಯನಿರ್ವಹಿಸಬೇಕಿದೆ. ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಟಾನ ಕೇವಲ ಸರ್ಕಾರದ ಮೇಲೆ ಇರದೇ ನಮ್ಮೆಲ್ಲರ ಮೇಲಿದೆ ಎಂದು ಅರಿತಾಗ ಮಾತ್ರ ಆ ಯೋಜನೆಯು ಯಶ್ವಸ್ವಿಯಾಗಲೂ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸುನೀಲ ನಾಯ್ಕ ಮಾತನಾಡಿ ಹೊಳೆಸಾಲು ಭಾಗದ ಜನರು ನನಗೆ ಅತಿ ಹೆಚ್ಚು ಮತಗಳನ್ನು ನೀಡಿದ್ದಾರೆ ಮುಂದಿನ ದಿನದಲ್ಲಿ ಅವರ ಮತಕ್ಕೆ ಋಣ ತೀರಿಸುವ ಕೆಲಸ ಮಾಡುತ್ತೇನೆ. ನಿಮ್ಮ ಪ್ರೀತಿಯನ್ನು ಎಂದೆದಿಗೂ ಉಳಿಸಿಕೊಳ್ಳುತ್ತೇನೆ ಕೇಂದ್ರ ಸರ್ಕಾರ ಹಲವಾರು ಜನೊಪಯೋಗಿ ಕಾರ್ಯಕ್ರಮ ಜಾರಿಗೆ ತರುತ್ತಿದ್ದು ಅದನ್ನು ಪ್ರತಿ ಮನೆಗೆ ತಲುಪಿಸುವ ಕೆಲಸ ಮಾಡಬೇಕಿದೆ. ಮುಂಬರುವ ಲೋಕಸಭಾ ಚುನಾವಣೆಗೆ ನಮ್ಮ ಬಿಜೆಪಿಯಿಂದ ಯಾವುದೇ ಅನುಮಾನವಿಲ್ಲದೇ ನಮ್ಮ ಸಂಸದರೆ ಅಭ್ಯರ್ಥಿ ಅವರೆ ವಿಜಯಿಯಾಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಮಾಗೊಡ ಭಾಗದ ಸಾರ್ವಜನಿಕರ ವತಿಯಿಂದ ಸಚೀವರಿಗೆ ಮತ್ತು ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ವಿನೋಧಾ ನಾಯ್ಕ, ನಿಕಟಪೂರ್ವ ಅಧ್ಯಕ್ಷರಾದ ಎಂ.ಜಿ.ನಾಯ್ಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸಳೆ, ಸುಬ್ರಾಯ ನಾಯ್ಕ ಭಟ್ಕಳ, ಉಮೇಶ ನಾಯ್ಕ, ತಾಲೂಕ ಅಧ್ಯಕ್ಷ ಸುಬ್ರಾಯ ನಾಯ್ಕ, ಗ್ರಾಮ ಪಂಚಾಯತ ಉಪಾಧ್ಯಕ್ಷ ವೆಂಕಟೇಶ ಮೇಸ್ತ, ಕೇಶವ ನಾಯ್ಕ ಬಳ್ಕೂರು ಉಪಸ್ಥಿತರಿದ್ದರು.
Leave a Comment