ಹೊನ್ನಾವರ ,ತಾಲೂಕಿನ ಗೇರಸೊಪ್ಪಾದ ಗುತ್ತಿಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ 63 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕನ್ನಡ ಜ್ಯೋತಿ ಯುವಕ ಸಂಘ(ರಿ)ಗೇರಸೊಪ್ಪಾ ಇವರ ಆಶ್ರಯದಲ್ಲಿ ಅದ್ದೂರಿಯಾಗಿ ಚಾಲನೆಗೊಂಡಿತು. ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನೀಲ ಬಿ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಗ್ರಾಮಿಣ ಭಾಗದಲ್ಲಿನ ಯುವಕ ಸಂಘಗಳೆ ಕನ್ನಡ ಉಳಿಸಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು. ಅದರ ಜೊತೆಯಲ್ಲಿ ಯುವಕ ಸಂಘಗಳ ಮೂಲಕ ಯುವ ಸಮುದಾಯ ನಿಷ್ಪಕ್ಷಪಾತವಾಗಿ ಸಮಾಜದ ಈ ದೇಶದ ಸರ್ವಾಂಗೀಣ ಅಭಿವೃಧ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಹೇÉಳಿದರು.
ಮುಖ್ಯ ಅತಿಥಿಗಳಾದ ಗೆರುಸೊಪ್ಪಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ನಾಗರಾಜ ಹೆಗಡೆ ಮಾತನಾಡಿ ಕನ್ನಡವು ತನ್ನದೆ ಆದ ಇತಿಹಾಸವನ್ನು ಹೊಂದಿದ್ದು ರನ್ನ ,ಪಂಪ ರಂತಹ ಮಹಾ ಕವಿಗಳು ಹುಟ್ಟಿಕೊಂಡಂತಹ ಪುಣ್ಯ ಭೂಮಿ ನಮ್ಮದು ಅದನ್ನು ಉಳಿಸಿ ಬೆಳೆಸಿ ಎಂದು ಹೇಳಿದರು
. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕಾ ನಾಮಧಾರಿ ಸಂಘದ ಅಧ್ಯಕ್ಷರಾದ ಮಂಜುನಾಥ ನಾಯ್ಕ ಮಾತನಾಡಿ ಯುವಕರು ಯುವಕ ಸಂಘದ ಮೂಲಕ ಗ್ರಾಮದ ಊರಿನ ಏಳ್ಗೆಗಾಗಿ ಶ್ರಮವಹಿಸಬೇಕು. ಸಂಘ ಒಂದು ದಿನದ ಕಾರ್ಯಕ್ರಮಗಳಿಗೆ ಸೀಮಿತವಾಗಿರದೆ ನಿರಂತರವಾಗಿ ಧಾರ್ಮಿಕ ,ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ತೊಡಗಿದಾಗ ಮಾತ್ರ ಪರಿಪೂರ್ಣವಾಗಿರುತ್ತದೆ ಎಂದರು .
ವೇದಿಕೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಚಂದ್ರಶೇಖರ ಎಮ್. ,ಗ್ರಾ.ಪಂ.ಅಧ್ಯಕ್ಷರಾದ ಅನ್ನಪೂರ್ಣ ಶಾಸ್ತ್ರಿ ,ಗ್ರಾ.ಪಂ ಸದಸ್ಯರಾದ ಮಂಜುನಾಥ ನಾಯ್ಕ ,ಕದಂಬ ಸೈನ್ಯದ ಅಧ್ಯಕ್ಷರಾದ ಗಣಪತಿ ನಾಯ್ಕ , ವಕೀಲರಾದ ಮಹೇಶ ನಾಯ್ಕ , ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷರಾದ ವಿನಾಯಕ ನಾಯ್ಕ ,ಸುಬ್ರಾಯ ನಾಯ್ಕ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಸಂತೋಷ ನಾಯ್ಕ ಪ್ರಾಸ್ಥಾವಿಕ ನುಡಿದರು . ಶಿವರಾಜ ನಾಯ್ಕ ಸ್ವಾಗತಿಸಿದರು .ಸರಿತಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರಿಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ನಂತರ ಸ್ಥಳೀಯ ವಿಧ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಓಶಿಯನ್ ಹಾರ್ಟ ಬ್ರೇಕರ್ ಇವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಊರಿನ ಸಮಸ್ಥರು ಪಾಲ್ಗೊಂಡರು.
Leave a Comment