ಹೊನ್ನಾವರ :
ಸ್ಪರ್ಧಾತ್ಮಕ ಜಗತ್ತಿನಲ್ಲಿ ಕ್ರೀಡೆ ಬಹಳಷ್ಟು ಮೈನವಿರೇಳಿಸುವ ಕ್ಷೇತ್ರ. ಕ್ರೀಡೆ ಸಂಸ್ಕøತಿಯ ಒಂದು ಭಾಗವಾಗಿದ್ದು, ಕ್ರೀಡೆಯ ಮೂಲಕ ಜಗತ್ತು ವಿವಿಧ ಸಂಸ್ಕøತಿಗಳನ್ನು ಹತ್ತಿರದಿಂದ ನೋಡುವಂತಾಗಿದೆಯಲ್ಲದೇ, ಸೌಹಾರ್ದತೆಗೆ ಒಂದು ಉತ್ತಮ ವೇದಿಕೆ ಎಂದು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ನುಡಿದರು.
ಅವರು ಹೊನ್ನಾವರದ ಎಸ್.ಡಿ.ಎಮ್. ಕಾಲೇಜಿನಲ್ಲಿ ಲಯನ್ಸ್ ಕ್ಲಬ್ ಹೊನ್ನಾವರ ಹಾಗೂ ನವೋಲ್ಲಾಸ ಸ್ಪೋಟ್ಸ್ ಕ್ಲಬ್ ಹೊನ್ನಾವರ ಇವರ ಸಹಭಾಗಿತ್ವದಲ್ಲಿ ನಡೆದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಈ ಮುಂದುವರಿದು ಇಂತಹ ಕ್ರೀಡಾಕೂಟಗಳು ಪರಸ್ಪರ ಪ್ರೀತಿ, ವಿಶ್ವಾಸ, ಮಾನವೀಯ ಸ್ಪಂದನ, ದೃಢತೆ, ಸ್ಪರ್ಧಾ ಮನೋಭಾವನೆ ಮುಂತಾದ ಮೌಲ್ಯಗಳನ್ನು ವೃದ್ಧಿಸಿಕೊಳ್ಳಲು ಸಹಾಯಕ ಎಂದುರು.
ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಎಸ್.ಡಿ.ಎಮ್. ಕಾಲೇಜಿನ ಪ್ರಾಚಾರ್ಯರಾದ ವಿಜಯಲಕ್ಷ್ಮಿ ನಾಯ್ಕ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಶುಭ ಕೋರಿದರು.
ಎಮ್.ಪಿ.ಇ. ಸೊಸೈಟಿಯ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ, ಹಾಗೂ ನವೋಲ್ಲಾಸ ಸ್ಪೋಟ್ಸ್ ಕ್ಲಬ್ಬಿನ್ ಗೌರವಾಧ್ಯಕ್ಷರು ಲಯನ್ಸ್ ಕ್ಲಬ್ಬಿನ್ ಸದಸ್ಯರಾದ ವಸಂತ ಪ್ರಭು ಮಾತನಾಡಿದರು.
ಶಟಲ್ ಬ್ಯಾಡ್ಮಿಂಟನ್ನಲ್ಲಿ ವಿಶ್ವವಿದ್ಯಾಲಯಮಟ್ಟದಲ್ಲಿ ಸಾಧನೆ ಮಾಡಿದ ಎಸ್.ಡಿ.ಎಮ್. ಕಾಲೇಜಿನ ವಿದ್ಯಾರ್ಥಿ ಕುಮಾರ ನಾರಾಯಣ ವಿ. ಭಟ್ಟ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. 40 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಡಾ|| ಕೈಲಾಸ ಪೈ ಮತ್ತು ನಿತಿನ್ ದೇಶಪಾಂಡೆ ಹಳಿಯಾಳ ಪ್ರಥಮ. ಅನಿಲ ಮತ್ತು ವಿಶ್ವಜಿತ ದ್ವಿತೀಯ ಸ್ಥಾನ ಪಡೆದರೆ, 40 ವರ್ಷದೊಳಗಿನ ವಿಭಾಗದಲ್ಲಿ ನಿಖಿಲ್ ಮತ್ತು ಸಂಕೇತ ವೈದ್ಯ, ಭಟ್ಕಳ ಪ್ರಥಮ, ದಿಲೀಪ ಮತ್ತು ವಿಶ್ವಾಸ ದ್ವಿತೀಯ ಸ್ಥಾನ ಪಡೆದರು. ವಿಜೇತರಿಗೆ ಎಸ್.ಡಿ.ಎಮ್. ಕಾಲೇಜಿನ ಕ್ರೀಡಾ ವಿಭಾಗದ ಮುಖ್ಯಸ್ಥರಾದ ಆರ್.ಕೆ. ಮೇಸ್ತ ಇವರು ಬಹುಮಾನ ವಿತರಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಸದಸ್ಯರು ನವೋಲ್ಲಾಸ ಸ್ಪೋಟ್ಸ್ ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ಬಿನ ಕ್ರೀಡಾ ಸಮಿತಿ ಅಧ್ಯಕ್ಷರಾದ ಲಯನ್ ಅಧ್ಯಕ್ಷರಾದ ರಾಜೇಶ ಸಾಳೇಹಿತ್ತಲ್ ಎಲ್ಲರನ್ನು ಸ್ವಾಗತಿಸಿದರು. ನವೋಲ್ಲಾಸ ಸ್ಪೋಟ್ಸ್ ಕ್ಲಬ್ಬಿನ ಅಧ್ಯಕ್ಷರಾದ ಕಿರಣ ಪ್ರಭು ವಂದಿಸಿದರು.
Leave a Comment