ಹಳಿಯಾಳ: ದಿ. 27 ಮಂಗಳವಾರದಂದು ಹಳಿಯಾಳದ ಗ್ರಾಮದೇವಿ ಉಡಚಮ್ಮಾ(ಲಕ್ಷ್ಮೀ) ದೇವಿಯ 2ನೇ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲಿವೆ ಎಂದು ಗ್ರಾಮದೇವಿ ಉಡಚಮ್ಮಾ ಹಾಗೂ ದೇಮವ್ವಾ ದೇವಿ ಟ್ರಸ್ಟ್ನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಶೆಟ್ಟಿಗಲ್ಲಿಯಲ್ಲಿರುವ ದೇವಸ್ಥಾನದಲ್ಲಿ ದಿ.27 ರಂದು ಬೆಳಿಗ್ಗೆ 8ರಿಂದ ಗಣೇಶ ಪೂಜೆ, ಪುಣ್ಯಾಹವಾಚನ, ಕ್ಷೇತ್ರಪಾಲ ಪ್ರಾರ್ಥನೆ, ಕಳಸ ಸ್ಥಾಪನೆ, ನವಗ್ರಹ ಹೋಮ, ದುರ್ಗಾಹೋಮ, ಕುಷ್ಕಾಂಡ ಬಲಿದಾನ, ದೇವಿಯರಿಗೆ ಮಂಗಳಾರತಿ, ಮಧ್ಯಾಹ್ನ 12.30ರಿಂದ ಸಾಮೂಹಿಕ ಅನ್ನಸಂತರ್ಪಣೆ ಹಾಗೂ ಮಧ್ಯಾಹ್ನ 2.30ರಿಂದ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಬಳಿಕ ಸಾಯಂಕಾಲ 7 ಗಂಟೆಗೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಲಾಗಿದೆ.
Leave a Comment